ಎಷ್ಟು ಗ್ರಂಥಗಳ ಓದಿದರೇನು
ಪುರಾಣ ವೇದ ಪಠಿಸದರೇನು
ಅಂತರಂಗ ಶುದ್ಧವಾಗಿರದೆ
ಬಾಳಿಗೆ ಇನ್ನೊಂದು ಅರ್ಥವೇನು
ಕಾಮಕ್ರೋಧ ಮನದಿ ಅಳಿದಿಲ್ಲ
ಹೆರವರು ನನ್ನವರೆಂಬದು ತಿಳಿದಿಲ್ಲ
ನಿತ್ಯವೂ ಸ್ವಾರ್ಥಗಳಲಿ ತೇಲಿ
ನಿಸ್ವಾರ್ಥದ ಅರ್ಥವೇ ತಿಳಿದಿಲ್ಲ
ಜನ ಮೆಚ್ಚಿಸಲು ನಾನು ನಿತ್ಯ
ನೂರಾರು ಪ್ರಯೋಗ ಮಾಡುವೆ
ಅಂತರದಲ್ಲಿ ಬದಲಾಗದೆ ನಾನು
ಶಿವನ ಕಾಶಿ ಪ್ರಯಾಗದಲಿ ಮಿಂದುವೆ
ಮಡಕೆ ಮೇಲ್ಮೈ ತೊಳೆದರೇನು
ಅಂತರದಿ ಕೊಳೆ ದೂರಾಗುವುದೇ
ಮಾಣಿಕ್ಯ ವಿಠಲನ ನೆನೆಯದೆ
ಅಮೃತವಿಲ್ಲದೆ ವಿಷವಾಗದಿರದೆ!
*****















