ಶೇಖರಿಸಿಟ್ಟಿದ್ದ ಪುರಾಣದ ಪುಸ್ತಕಗಳನ್ನು ಕತ್ತೆ ಒಂದು ರಾತ್ರಿ ತಿಂದು ಜೀರ್ಣಿಸಿಕೊಂಡಿತ್ತು. ಕತ್ತೆಯ ಮಾಲಿಕನಾದ ಅಗಸನಿಗೆ ಬಹಳ ಹೆಮ್ಮೆ ಎನಿಸಿತು. “ನಾನು ಬಟ್ಟೆ ಎತ್ತಿ ಒಗಿಯುವದರಲ್ಲಿ ಕಾಲ ಕಳೆದೆ. ನನ್ನ ಕತ್ತೆಯೇ ನನಗಿಂತ ಮೇಲು. ನನಗೆ ಪುರಾಣಗಳನ್ನು ಓದಲು ಅವಕಾಶವಾಗಲಿಲ್ಲ. ನನ್ನ ಕತ್ತೆ ಎಂಥ ಭಾಗ್ಯವಂತ! ಪುರಾಣಗಳನ್ನು ಜೀರ್ಣಿಸಿಕೊಂಡಿರುವೆ” ಎಂದು, ಅರಿಸಿನ ಕುಂಕುಮ ಹಚ್ಚಿ ಹಾರಹಾಕಿ, ಮೆರವಣಿಗೆ ಮಾಡಿದ. ಉದಾತ್ತ ಕತ್ತೆಯ ಕಾಲು ಹಿಡಿದು ನಮಸ್ಕರಿಸಿದ. ಉದಾತ್ತ ಕತ್ತೆ ಕಾಲಿಂದ ಝಾಡಿಸಿ ಒದ್ದಿತು. ಅಗಸನಿಗೆ ಆಗ ಜ್ಞಾನೋದಯವಾಯಿತು.
*****