ಎಷ್ಟೆ ಗಡಿಬಿಡಿ ಇರಲಿ, ಗಡಿಬಿಡಿ ಸಾರು ಮಾ
ಳ್ಪಷ್ಟಾದೊಡಂ ಅಡುಗೆಮನೆ ಕೆಲಸವೆಮಗಿರಲಿ
ಲೊಟ್ಟೆ ಜಾಹೀರಿಗೆಮ್ಮ ಮನ ಜಾರದಿರಲಿ
ಹೊಟ್ಟೆಯೊಳು ಬರಿ ತೊಟ್ಟೆಯಬ್ಬರವೇರದಿರಲಿ
ರಟ್ಟೆಯೊಳನ್ನದಭಿಮಾನ ಆರದಿರಲಿ – ವಿಜ್ಞಾನೇಶ್ವರಾ
*****