ಪಾಲು ಮಕ್ಕಲನೆ ಕರ್‍ದಾನೋ ಮಗರಾಯಾ
ಆಲು ಮಕ್ಕಲನೆ ಕರ್‍ದಾನೋ ಮಗರಾಯಾ || ೧ ||

ಹಲುವನಾ ಜನವೇ ಹಲವೆಗೆ || ತೆಗದಿಟ್ಟೇ
ಜಡವಿನಾ ಜನವ (ಜಡವಿಗೇ)
ಜಡವೆತ್ತಿ ಹೊಡಿವಾಗೇ || ೨ ||

ಹಲುವಿನಾ ಜನವೇ ಹಲವೆದ್ದೇ
ಹಲುವಿನಾ ಜನವೇ ಹಲವೆದ್ದೇ ಹೊಡವಾಗ || ೩ ||

ಕೆಂದೇರೀ ಮೊಗದಾ ಹುಲಿರಾಯಾ
ಕೆಂದೇರೀ ಮೊಗದಾ ಹುಲಿರಾಯಾ ನೋಡಾನೆ || ೪ ||

ಮಗರಾಯನಿದ್ದಲ್ಲಿ ಬರುತಾನೇ
ಮಗರಾಯನಿದ್ದಲ್ಲಿ ಬರ್ ವಂತಾ ಹೊತ್ತಿಗೇ || ೫ ||

ಅಂದಿನ ಮೋನಂಬು ಬಿಡುತಾನೇ
ಬಿಡವಂತಾ ಲೊತ್ತಿಗೆ
ಆಲು ಮಕ್ಕಲನೆ ಕರ್‍ದಾನೋ ಮಗರಾಯಾ || ೬ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.