ಭೂ ದೇವಿ ಆಡಿಸಿದಳು
ಜೋಗುಳವ ಮಲಗಿದ್ಹಾಂಗೆ
ಮನವು ಚಿಮ್ಮಿದ್ಹಾಂಗೆ
ಕಿಲಕಿಲನೆ ನಗಿಸ್ಯಾಳೋ
ಹಾಲ ಕುಡಿಸ್ಯಾಳೋ
ಎಳೆ ಚಿಗುರಿನ್ಹಾಂಗೆ
ಬೆಳೆಸ್ಯಾಳೋ ಬೇಗುದಿ
ಹಂಗೇ ಹೀಗೆಯೇ
ಹುಟ್ಟು ಸಾವಿಲ್ಲದ ಮರ
ಕನ್ನಡಿಯಲ್ಲಿನ ಬಿಂಬವು
ತಾಕಿತ್ತು ನಮಗ
ಪುಟಿ ಪುಟಿಯುತ್ತಿದೆ
ಧರ್ಮಕರ್ಮಗಳ ಸರಮಾಲೆ
ಹೊಸಕಿ ಹಾಕಿದರೋ ಎಳೆ ಚಿಗುರ
ತಿಗಣೆ ಹಾಂಗೆ
ಸುತ್ತ ನೋಡಿದರು
ಕೆಂಗಟ್ಟ ತಿಮಿರು
ಸೊಳ್ಳೆಗಳಾ ಹಾಗೆ ಭೂ ಒಡಲಮಾಯಿ
ಮತ್ತೆ ಜೋಗುಳ ಹಾಡಿ ಆಡಿದ
ನೆವ ಹುಟ್ಟಿನಲ್ಲು ಜಾಡಿಲ್ಲದ
ಸುತ್ತಿ ಸುತ್ತಿ ಕೆಂಡತ್ತಿ ಮಲಗಿದ್ಹಾಂಗೆ
ಕಂಗಳ ಮಡಿಲ ಯಾರೋ ಹೊಸಕಿ ಹಾಕಿದರು
ಬರಿದಾಗಿದೆ ಒಡಲು ಬಂಜೆ ಹಂಗೆ
ಯಾರಿಗೆ ಹೇಳಲಿ ನನ್ನವ್ವ
*****