ಅಸ್ಥಿಪಂಜರಗಳ ಕತೆ

ಚೀನಾದ ಬೀಜಿಂಗ್‌ನಲ್ಲಿ ಒಂದೇ ಕಡೆ ೯೭ ಅಸ್ಥಿಪಂಜರಗಳು ಅದು ಸಣ್ಣ ಮನೆಯಲ್ಲಿ ಸಿಕ್ಕಿವೆ….! ಅಲ್ಲಿಯ ಜನರೇನು ಪುರಾತತ್ವ ಶಾಸ್ತ್ರಜ್ಞರು ದಂಗು ಬಡಿದು ಹೋಗಿರುವರು.

ಈ ೯೭ ಅಸ್ಥಿಪಂಜರಗಳು ತಮ್ಮ ಕತೆ ವ್ಯಥೆಯನ್ನು ಈಗೀಗ ಅಂದರೆ.. ಆಗಸ್ಟ್ ೨೦೧೫ರಲ್ಲಿ ಹೇಳುತ್ತಿವೆ.

ಈ ೯೭ ಅಸ್ಥಿಪಂಜರಗಳು ಸುಮಾರು ಐದು ಸಾವಿರ ವರ್‍ಷಗಳಷ್ಟು ಹಳೆಯದಾದ ಸಣ್ಣ ಮನೆಯೊಂದರಲ್ಲಿದ್ದವುಗಳನ್ನು ಪುರಾತತ್ವ ಶಾಸ್ತ್ರಜ್ಞರು ಎಲ್ಲವನ್ನು ಹೊರಗೆಳೆದಿರುವರು.

ಇವೆಲ್ಲ ಭಾರಿ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರನ್ನು ಈಶಾನ್ಯ ಚೀನಾದ ಸಣ್ಣ ಮನೆಯಲ್ಲಿ ಒಟ್ಟಿಗೆ ಮಲಗಿಸಿ ಸುಡುತ್ತಿದ್ದರು. ಅದು ಉಳಿದವರಿಗೆ ಹರಡದಿರಲೆಂದು ಬಾಗಿಲು, ಕಿಟಕಿ, ಗವಾಕ್ಷಿ ಏನೆಲ್ಲ ಮುಚ್ಚಿ ಜಾಗ್ರತೆ ಮಾಡುತ್ತಿದ್ದರೆಂದು ಪುರಾತತ್ವ ಶಾಸ್ತ್ರಜ್ಞರು ವಿವರಿಸಿರುವರು.

ಈ ರೀತಿ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರಲ್ಲಿ ಹದಿಹರೆಯದವರು ಯುವಕರು-ಮಧ್ಯ ವಯಸ್ಕರು ಬಾಲಕರು ಎಲ್ಲ ರೀತಿಯ ವಯಸ್ಕರು ಇರುತ್ತಿದ್ದರೆಂದು ಅಸ್ಥಿಪಂಜರ ತಲೆಬುರುಡೆ ಇತ್ಯಾದಿಗಳನ್ನು ತೋರಿಸಿ ಅಲ್ಲಿದ್ದವರಿಗೆಲ್ಲ ವಿವರಿಸುತ್ತಿದ್ದರು.

ಈಶಾನ್ಯ ಚೀನಾದ ಈ ಭಾಗದಲ್ಲಿ ಲಿಪಿ ಇಲ್ಲದಾಗ ಇಲ್ಲಿನ ಜನರೆಲ್ಲ ಗುಂಪುಗುಂಪಾಗಿ ಸಣ್ಣ ಸಣ್ಣ ಮನೆಗಳಲ್ಲಿ ನೆಲೆಸಿದ್ದರೆಂಬುದನ್ನು ಸಂಶೋಧನೆಗಳು ಹೊರಗೆಡವಿಯಲ್ಲದೆ, ಆಹಾರಕ್ಕಾಗಿ ಮುಖ್ಯವಾಗಿ ಬೇಟೆಯಾಡುತ್ತಿದ್ದರೆಂಬುದನ್ನು ತಜ್ಞರು ಸಂಶೋಧಿಸಿರುವರು.

– ಹೀಗೆ ಸಂಶೋಧನೆಗಳು ತೀವ್ರಗೊಳ್ಳುತ್ತಾ ಹೋದಂತೆಲ್ಲ ಏನೆಲ್ಲ ರಹಸ್ಯಗಳು ಹೊಸ ಹೊಸ ಆವಿಷ್ಕಾರಗಳು ಹೊರಗೆ ಬೀಳಬಹುದೆಂದು ಕಾದು ನೋಡೋಣವಲ್ಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಮ್ಮನೇಕೆನ್ನನೆಲೆ ವಿಧಿಯೆ ಕಾಡಿಸುವೆ?
Next post ಗುಡಿಯಾ

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…