ಕಾಣುವ ಕಣ್ಣಿಗೆ ಎಲ್ಲಾ ಬೆರಗು

ಕಾಣುವ ಕಣ್ಣಿಗೆ ಎಲ್ಲಾ ಬೆರಗು
ಕಾಣುವ ಕಣ್ಣಿಗೆ ಎಲ್ಲೆಲ್ಲೂ ಸೊಬಗು

ದಿನ ದಿನ ಮೂಡುವ ನಸುಕಿನ ಬೆಳಕಿನ
ದಿನ ದಿನ ಮಾಯುವ ಸಂಜೆಯ ಥಳಕಿನ
ರಾತ್ರಿಯ ಭವ್ಯಾಕಾಶದ ಗಹನ
ಕೋಟಿ ದೀಪಗಳ ದೀಪಾರಾಧನ

ಮಳೆಬಿಸಿಲ ಬಾನಿನ ಕಾಮನ ಬಿಲ್ಲಿನ
ಹನಿಹನಿ ನೀರಿನ ಮುತ್ತಿನ ಸರಮಾಲೆ
ಈ ಹುಲ್ಲ ಮೇಲಿನ ಮಣಿಮೇಖಲೆ

ನವ್ವಾಲೆಗರಿಗಳ ಕ್ಷಣಕ್ಷಣ ಬಣ್ಣದ
ಕಣ್ಣಿನ ಪಚ್ಚೆಯ ನೀಲಿಯ ಕಪ್ಪಿನ
ಹೊಂಚುವ ಬೆಕ್ಕಿನ ಆಳದ ಕಣ್ಣಿನ
ವನ ಹೊತ್ತಿ ಉರಿವಂಥ ಬೆಂಕಿಯ ಜ್ವಾಲೆಯ

ನಳನಳಿಸುವ ಹೊಸ ಬಿಮ್ಮನಸಿ ಪೈರಿನ
ಕಲಕಲ ಹರಿಯುವ ತಿಳಿ ನೀರ ಗಾಜಿನ
ಘಮಘಮಿಸುವ ಸಂಜೆ ಮಲ್ಲಿಗೆ ದಂಡೆಯ
ಜಡೆಯಲ್ಲಾಡಿಸಿ ನಡೆಯುವ ಹೆಣ್ಣಿನ

ಕರುವಿಗೆ ಹಾಲೊಸೆವ ಹಸುವಿನ ಒಲವಿನ
ಮಗುವಿಗೆ ಊಡುವ ಮಾತೆಯ ಮಮತೆಯ
ನಲ್ಲನಲ್ಲೆಯರ ಮಾತಿನ ಪ್ರೀತಿಯ
ಪ್ರೇಮಕಾಮಗಳ ಶತಕೋಟಿ ರೀತಿಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾವು ಕಡಿದವರಿಗೆ ಸಿದ್ಧೌಷಧಿ (ಆಯುರ್ವೇದ)
Next post ಆ ದಿನ ಕಂಡೇ ಕಾಣುತ್ತೇವೆ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…