ಹಾವು ಕಡಿದವರಿಗೆ ಸಿದ್ಧೌಷಧಿ (ಆಯುರ್ವೇದ)

ರೈತರು, ರೈತಮಕ್ಕಳು, ದನಗಾಹಿಗಳು, ಅರಣ್ಯನಿವಾಸಿಗಳು ಮೇಲಿಂದ ಮೇಲೆ ಕಾಡು, ಮೇಡು, ಪೊಟರೆ, ಹಳ್ಳ, ಗಿಡ, ಬಳ್ಳಿಗಳ ನಡುವೆ ತಿರುಗಾಡಲೇ ಬೇಕಾಗುತ್ತದೆ. ಆಗ ಸಹಜವಾಗಿ ವಿಷಜಂತುವಾದ ಹಾವು ಕಚ್ಚಿಬಿಡುತ್ತದೆ. ಆಗ ತಕ್ಷಣಕ್ಕೆ ಔಷಧಿ ಅಥವಾ ಇಂಗ್ಲಿಷ್ ಚಿಕಿತ್ಸೆ ಸಿಗದೇ ಸಾವನ್ನಪ್ಪಬಹುದು. ಈ ರೀತಿಯಾಗಿ ಭಾರತದೇಶದಲ್ಲೊಂದೆ ೨೫ ಸಾವಿರದಷ್ಟು ಜನ ಅಸುನೀಗುತ್ತಾರೆಂದರೆ ಇದರ ಭೀರಕರತೆಯ ಅರ್ಥವಾಗುತ್ತದೆ. ಈ ಸಂದರ್ಭದಲ್ಲಿ ತಕ್ಷಣ ಸಿಗುವ ಆಯುರ್ವೇದ ಸೊಪ್ಪುಗಳನ್ನು ಕಲೆಹಾಕಿ ಸೇವಿಸಿದರೆ ಸಾವನ್ನು ತಪ್ಪಿಸಬಹುದು.

ಒಂದೆಲಗ (ಜ್ಞಾನಪತ್ರೆ), ಕರಿಲಕ್ಕಿ ಸೊಪ್ಪು, ಕರಿನುಗ್ಗೆ ಸೊಪ್ಪು, ಬಿಳಿ ಎಕ್ಕದ ಸೂಪ್ಪು, ನಿಂಬೆ ತುಳಸಿಗಿಡದ ಸೊಪ್ಪು, ನಾಗದಾಳಿ ಸೊಪ್ಪು, ಆಡುಮುಟ್ಟದ ಸೊಪ್ಪು (ಕತ್ತೆಕಾಲಂಬು) ಕಹಿಸೊರೆ‌ಎಲೆ, ವಿಷಹಾರಿಸೊಪ್ಪು, ಕರಿ ಉಮ್ಮತ್ತಗದ ಎಲೆಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನೆರಳಿನಲ್ಲಿ ಒಣಗಿಸಿ ನುಣ್ಣಗೆ ಪುಡಿಮಾಡಿ ಒಂದು ಗಾಜಿನ ಬಾಟಲಿಯಲ್ಲಿ ಅಥವಾ ಕಹಿ ಸೊರೆ ಬುರಡೆಯಲ್ಲಿ ಶೇಖರಿಸಿ ಇಟ್ಟುಕೊಂಡು ಹಾವು ಕಡಿದಾಗ ನಿಂಬೆಹಣ್ಣನ್ನು ಸಮಪಾಲುಮಾಡಿ ಮಿಶ್ರಣವನ್ನು ಈ ನಿಂಬೆ ಹಣ್ಣಿನ ಹೋಳಿಗೆ ಸೇರಿಸಿ ಚೀಪಿಸುವುದರಿಂದ ಅಥವಾ ಕುಡಿಯುವುದರಿಂದ (ನೀರನ್ನು ಸೇರಿಸಬಾರದು) ಖಂಡಿತ ಸಾವನ್ನು ತಪ್ಪಿಸಬಹುದು ಹಾವು ಕಡಿದಾಗ ನಿದ್ರೆ ಮಾಡಬಾರದು ಎಂದು ಆಯುರ್ವೇದ ವಿಜ್ಞಾನಿಗಳು ಶೃತಪಡಿಸಿದ್ದಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೂಸಿನ ಹಾಡು
Next post ಕಾಣುವ ಕಣ್ಣಿಗೆ ಎಲ್ಲಾ ಬೆರಗು

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…