ಗಿರಿಯೊಳಗೆ ನೀನೆ ಮುಗಿಲೊಳಗೆ ನೀನೆ
ಕಡಲೊಳಗೆ ನೀನೆ
ಕಾನನದೊಳಗೆ ನೀನೆ
ಓ ಅನಾದಿಯವನೆ

ನದಿಯೊಳಗೆ ನೀನೆ ನಭದೊಳಗೆ ನೀನೆ
ಅಂತರಂಗದೊಳು ನೀನೆ
ಬಹಿರಂಗದೊಳು ನೀನೆ

ವ್ಯಕ್ತದೊಳ ನೀನೆ ಅವ್ಯಕ್ತದೊಳ ನೀನೆ
ಅನ್ಯದೊಳ ನೀನೆ
ಅನನ್ಯದೊಳ ನೀನೆ

ತಮದೊಳಗೆ ನೀನೆ ದ್ಯುತಿಯೊಳಗೆ ನೀನೆ
ಆದಿಯೊಳಗೆ ನೀನೆ
ಅನಾದಿಯೊಳಗೆ ನೀನೆ

ಹುಲ್ಲು ನೀನೆ ಬೆಂಕಿಯು ನೀನೆ
ನಾನುರಿಯಲು ನೀ ಉರಿಯುವವನೇ
ನಾ ಮರೆತಾಗ ಎಚ್ಚರಿರುವವನೇ
ಸದಾಶಿವನೆ
*****