ಮುದ್ದು ಮರಿ
ನಾಯಿ ಮರಿ
ಬೇಗ ಬೇಗ
ಹಾಲು ಕುಡಿ

ಅಪ್ಪ ಬಂದ್ರೆ
ಪೇಟೆಯಿಂದ
ಕ್ಯುಂ ಕ್ಯುಂ
ರಾಗ ತೆಗಿ

ನಿನಗೆ ನೋಡು
ಬಿಸ್ಕೇಟು
ನನಗೆ ಮಾತ್ರ
ಚಾಕ್ಲೇಟು

ಅಮ್ಮ ಬಂದ್ಲು
ನೋಡು
ಸುಮ್ಮನವಳ
ಕಾಡು

ಕೊಡುವಳು
ನಿಂಗೆ ತಿಂಡಿ
ಜೋರಾಗಿ
ಕಿವಿಯನು ಹಿಂಡಿ.
*****