ತಾಯೇ ಈ ಜನ್ಮ ನೀನಿತ್ತ ಭಿಕ್ಷೆ

ತಾಯೇ, ಈ ಜನ್ಮ ನೀನಿತ್ತ ಭಿಕ್ಷೆ
ಈ ಬದುಕು ನೀನಿತ್ತ ದೀಕ್ಷೆ||

ನೀ ಆಸೆಪಟ್ಟು ಹಡೆಯದಿದ್ದರೆ
ನಾವೆಲ್ಲಿ ಇರುತಿದ್ದೆವು ಈ ಭೂಮಿ ಮೇಲೆ|
ನೀ ಬೆಳೆಸಿ ಹರಸಿದ ಮೇಲೆ
ನಾವು ನಿನ್ನಾಸೆಯಂತಾಗಿ
ಸೇರಿಯೆವು ತರತರದ ನೆಲೆ||

ನಿನ್ನ ತ್ಯಾಗ ನಿಸ್ವಾರ್ಥ ಸೇವೆಗೆ
ಬೆಲೆ ತೆರಲಾರೆವು ನಾವು|
ನಿನ್ನ ನಿಷ್ಕಲ್ಮಶ ಪ್ರೀತಿ ಮಮತೆಯ
ಋಣವ ನಾವ್ಯಾರೂ ತೀರಿಸಲಾರೆವು||

ನೀನೊಂದು ಕಾಮಧೇನು
ಕಲ್ಪವೃಕ್ಷ ಯೋಗಶಾಲೆ ಈ ಮನುಕುಲಕೆ|
ತಾಯೇ ನೀನೇ ಮಾತಾಮಹಿ
ನಿನಗೆ ನನ್ನ ಅನಂತಾನಂತ
ಸಾಷ್ಟಾಂಗ ನಮಸ್ಕಾರಗಳ ಶರಣು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಹಾಕಾವ್ಯ
Next post ನಮಗೆಯು ಹೆಸರೊಂದನು ತರಲಿ!

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…