ಸಗ್ಗದ ಬೆಳಕೇ

ವಿಶ್ವವ ತುಂಬಿದ ಸಗ್ಗದ ಬೆಳಕೇ
ಬೆಳಗೈ ನಮ್ಮೆಲ್ಲರ ಮನವ
ಬದುಕನು ಲೀಲೆಯ ರೂಪದಿ ಬಾಳಲು
ಬೆಳೆಸೈ ನಮ್ಮೆಲ್ಲರ ತನುವ || ೧ ||

ಶಕ್ತಿಯ ಸ್ಫೂರ್ತಿ ಮುಕ್ತಿಯ ಕೀರ್ತಿ
ಜ್ಞಾನ ಜ್ಯೋತಿಯ ನೀ ಬೆಳಗು
ಕತ್ತಲಿನೆಡೆಯಿಂ ಬೆಳಕಿನ ದಿಸೆಯಲಿ
ನಮ್ಮನು ನಡೆಸೌ ನಿಶೆಯೊಳಗು || ೨ ||

ಜೀವನ ಸಮರದಿ ನಾವು ಯೋಧರು
ದೇವನೆ ಹೋರುವ ಬಲ ನೀಡೈ
ಸೋಲೋ ಗೆಲುವೊ ನಿನ್ನಯ ಒಲವು
ಕಾದುವ ಕಲಿತನವನು ನೀಡೈ || ೩ ||

ಯುದ್ಧರಂಗದಲಿ ಹೆಜ್ಜೆಯ ಹಿಂದಿಡೆ
ನರಕವು ಅಸಹ್ಯ ಸಾವೇ ಸೈ
ಅಂಜಿದ ಅರ್ಜುನನನು ಕಾಪಾಡಿದ
ನರಸಾರಥಿಯೆಮ್ಮನು ನಡೆಸೈ ||೪ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರುಗ್ಣ ಯಾಕುಬ
Next post ಬೇಂದ್ರೆ ವಿಮರ್ಶೆಗೆ ನಾಲ್ಕು ಮಾತು

ಸಣ್ಣ ಕತೆ

 • ಹೃದಯದ ತೀರ್ಪು

  ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಗಂಗೆ ಅಳೆದ ಗಂಗಮ್ಮ

  ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

 • ಕ್ಷಮೆ

  ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…