ಮದುವಣ ಗಿತ್ತಿಯಂತೆ
ಶೃಂಗಾರಗೊಂಡು
ಒಡಲೊಳಗೇ
ಮಧುಜೇನ ತುಂಬಿಕೊಂಡು
ಮನದಿನಿಯನಿಗಾಗಿ
ಹಾತೊರದು ನಿಂತು
ಸ್ವಾಗತ ಮಾಡಿದ
ಎನ್ನ ಮನದನ್ನೆ….
ಎನ್ನ ಮನದಾಸೆಯ
ಅರಿತು ನೀ
ನನ್ನನೊಮ್ಮೆ
ಬಿಗಿದಪ್ಪಿ ಬರಸೆಳೆದು
ಸೆರಗಿನ ಮರೆಯಲಿ
ಅಡಗಿಸಿದಾಗ
ಮರು ಮಾತನಾಡದೆ
ಮೌನಿಯಾಗಿ
ಮಗುವಂತೆ ಸೇರಿದೆ
ನಿನ್ನ ಮಡಿಲನ್ನೇ…
*****