ಕಾಲ ಕರುಳಿಲ್ಲದ ಕರೀ ಘಡವ,
ಕದಿಯುವುದರಲ್ಲಿ ಕತ್ತೆಭಡವ.
ಬಂತೆನ್ನಿ ಆಸಾಮಿ ಪಟ್ಟಿಗೆ
ಹಾರಿಸುತ್ತಾನೆ ಒಟ್ಟಿಗೆ:
ನಾಲಿಗೆಯಿಂದ ಮಾತು,
ಆಲಿಗಳಿಂದ ಬೆಳಕು,
ಎದೆಯಿಂದ ಚಿಲುಮೆ,
ಕೈಯಿಂದ ದುಡಿಮೆ.
ಹೀಗೆ ಕಿತ್ತು ಪಟ ಪಟ ಇಟ್ಟಿಗೆ
ತಳ್ಳಿಬಿಡುತ್ತಾನೆ ದೈತ್ಯ
ಬ್ರೂಸ್‍ಲೀಯನ್ನೂ ಸಹ
ಆರಡಿ ಅಗಲದ
ಮಣ್ಣಿನ ತೊಟ್ಟಿಗೆ!
*****