ತೆರೆ ಹಾಸು ಪಾಸು

ತೆರೆ ಹಾಸು ಪಾಸು
ಇಬ್ಬನಿಯ ಹಾಸು
ಕಣ್ ಮನವು ತುಂಬಿ ಬಂತು ||

ನೇಸರನ ಬಿರುಸು
ಹೊಸ ಗಾಳಿ ತಂಪು
ಬಿರಿದಿರುವ ಸುಮದ ಕಂಪು ||

ಮುದವಾಗಿ ಬಂತು
ಹನಿಯಾಗಿ ಬಂತು
ಆ ಸ್ವಾತಿ ಮುತ್ತು ತಂತು ||

ಅಪ್ಪನ ಆ ಒರಗು
ಅವ್ವನ ಆ ಸೆರಗು
ಹಿತವಾಯ್ತು ಒಳಗು ಹೊರಗು ||

ಸುಮಸುಮದ ಕಂಪು
ಆ ಹಸಿರ ಇಂಪು
ಹೃದಯಕ್ಕೆ ತಂಪು ಇಂಪು ||

ಕೆಸರಾದ ನೆಲವು
ಉಸಿರಾಡಿದ ಜೀವ
ಸಸಿಯಾಗಿ ಬೆಳೆದು ನಿಂತು ||

ಬಳುಕುತ್ತ ಬಾಗಿ
ಬಾಗುತ್ತಾ ಬೀಗಿ
ಬೆಳೆದಿತ್ತು ಬಳ್ಳಿ ಸಾಲು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲ
Next post ಮಲಗಿರುವ ಕನ್ನಡಿಗ

ಸಣ್ಣ ಕತೆ