ಮರವನೇರಿ ತುದಿಯಲ್ಲಿ
ಕುಳಿತಿದೆ ಹೂವು

ಪುಟ್ಟ ಹುಡುಗಿಯರೆ…
ಕಣ್ಣರಳಿಸಿ ನೋಡಿ
ಹೂವಾಡಗಿತ್ತಿಯರೆ…
ಹೂವಿನಂದವ ನೋಡಿ
ಹಿಗ್ಗಿ ಹಾಡಿ

ಏ… ಹೂವೆ
ಹೇಗೆ ಕಾಣುವುದೊ
ಅಲ್ಲಿಂದ ಈ ಜಗತ್ತು?
ನೆಲದಲ್ಲಿರುವೆ ನಾನು
ನನಗೆ ಗೊತ್ತಾಗದು

ಹಾಂ ಹಾಗೆ ಕೈ ಚಾಚು
ದೇವ ಲೋಕವೆ ಸಿಗುವುದು
ಕಾಲು ಜಾರಿದರೆ ಹಿಡಿದುಕೊಳ್ಳುವೆ
ನಿನಗೆ ನೋವಾಗದು

ಏ… ಹೂವೆ
ನಿನ್ನ ಭಾಷೆ ನನಗೆ ಅರ್ಥವಾಗುವುದು
ನನ್ನ ಆಶೆ ನಿನ್ನಂತೆ ಆಗುವುದು.
*****