ಚಾರೋ ಯಾರೋ ಅಲಿ ಪಾದಕ್ಕೆರಗಿ                 !|ಪ||

ಧರಿಸ್ಥಲದಿ ವಿರಾಟ ನಗರದಲ್ಲಿ
ಪಾಂಡವರ ಗುರುತವು ತಿಳಿದುಬಂದು
ಇರಲಿಕ್ಕಾಗಿ ತ್ವರಿತದಿ ಸಾಗಿ ಕೌರವರನ್ನು ನೀಗಿ
ಧರಿ ಭಾರಕ್ಕಾಗಿ ಸಾರಿ ಬೀಳಬೇಕನ್ನುತ ದಕ್ಷಿಣಭಾಗಕ್ಕೇರಿ  ||೧||

ಮಾರ್ಗ ಹಿಡಿದು ಬರುವ ಕಾಲದಲ್ಲಿ
ಮದೀನದ ಸ್ವರ್ಗಮಾನ
ಆ ಶಹರಿನೊಳು ಮಹಮ್ಮದನಿರಲು
ಯಮಜಗೆ ತೋರಲು ಭೂಮಿಪತಿ ಸಾರಲು
ಭೀಮನಿದನು ಕಂಡು ಅರ್ಜುನ ನಕುಲ-ಸಹದೇವರೋ      ||೨||

ಅಲ್ಲೇ ಕಂಡು ಹೇಳಿದ ಪಾಂಡವಸಂತರಲ್ಲಿ
ಹಿರಿಯ ಧರ್ಮನಿಗೆ ಕಂಕನಾಗೆನುತ
ಅಲಿ ಪಾತಕಿ ತಾ ಕಲಿ ಕರ್ಮೆನ್ನುತಾ
ನೋಡಿ ಬಂದೆನುತಾ
ಬಾಲೆ ದ್ರೌಪತಿಗೆ ಸೈರೇಂದ್ರಿ ಎಂದೆನಲಾಗಿ                ||೩||

ಜ್ಞಾನ ತಿಳಿದು ಈ ಮನುಜನ
ಕೂನ ತಪ್ಪಿಸಲಾಗಿ
ಶಾರ ಹಾನಗಲ್ಲು ವಿಸ್ತರದಿ ಭಾರ
ಕಾನನದ ಇವರಾ ಸುತ್ತು ವನದಾಕಾರಾ
ತಾನು ತಿಳಿದು ನಿಂತಾನೋ ಕುಂತಿಸುತಾ ಮನಹರುಷದಿ    !|೪||

ಇತ್ತ ಇರಲಿತ್ತ ಇಲ್ಲಿಗೆ
ಹದಿಮೂರು ಸಂವತ್ಸರ
ತಿಳಿದು ಕಾಳಗದೊಳಗೆ ಕಡಿದ
ಕೀಚಕ ಮಡಿದ
ದ್ರೋಣಪರ್ವಿನಮಾತು ಆತೋ ರಿವಾಯತೋ         || ೫ ||

ಅತಿ ಹಿತದ ಭಾರತ
ಕತಿ ಪುರಾಣ
ಹವಣ ಅರಿತು ರಾಧೆ ಹಿಂದಿನಲಿ
ಬಹು ಬಂದಿನಲಿ ವೇದ ಸಂದಿನಲಿ
ಸ್ಥಾನ ಶಿಶುವಿನಾಳಧೀಶನ ದಯದಿಂದ ಪಾಂಡವರೋ   ||೬ ||

*****