ಜಾರತ ಕರ್ಮವು ತೀರಿದ ಬಳಿಕ

ಜಾರತ ಕರ್ಮವು ತೀರಿದ ಬಳಿಕ
ಆರಿಲ್ಲದೋಯಿತು ಐಸುರ ಕೊಳಕ          ||ಪ||

ಮಾರನೋಮಿಗೆ ಕೂಡಿ ಬಂದಿತು
ಆರಿಗ್ಹೇಳಲಿ ತೀರಲರಿಯದು
ಮೂರು ಪುರವನು ನಾಶಮಾಡಿತು
ಘೋರತರದಲಾವಿಯ ಹಬ್ಬ              ||೧||

ಶುದ್ದಚಂದ್ರನ ಕಿರಣವು ಸೋಂಕಿ
ಎದ್ದು ಭೂಮಿಗೆ ಗುದ್ದಲಿ ಹಾಕಿ
ಸದ್ಯಕಿದು ವೇದಾಂತ ಶಾಸ್ತ್ರದ
ಮಧ್ಯದಲಿ ಹುಡಿಕ್ಯಾಡಿ ನೋಡಿಕೋ
ಬುದ್ಧಿವಂತರಿಗೆ ತಿಳಿಯತಕ್ಕದ್ದು
ಚೋದ್ಯವಾದಕ್ಷರ ಪದದಲಿ            ||೨||

ಪಾಪಾತ್ಮರಿಗೆ ಫಕೀರನು ಖೋಡಿ
ಕೆಂಪು ಕರದು ಹಸಿರು ಹಾಕಿ ಲಾಡಿ
ರೂಪ ತಪ್ಪಿಸಿಕೊಂಡು ಲೋಕದಿ
ಮನಿ ಮನಿಯ ತಿರಕೊಂಡು ತಿಂದರೆ
ಈ ಪದವಿ ಹ್ಯಾಂಗ ಸಿಕ್ಕೀತೋ
ಭೂಪ ಶಿಶುನಾಳಧೀಶ ಸಾರಿದ           ||೩||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕ ಪಯಣದಲ್ಲೊಂದು ಆಕಸ್ಮಿಕ
Next post ವಚನ ಸಂಪತ್ತು

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…