ಛೇ ಛೇ ಬ್ಯಾಡ ಬ್ಯಾಡ

ಛೇ ಛೇ ಬ್ಯಾಡ ಬ್ಯಾಡ ಬ್ಯಾಡ ತಗಿ
ಪಾಡ ಕಾಣೋದಿಲ್ಲೋ ಸಮರಾ ಐಸುರಾ              ||ಪ||

ಕವಿತ ಮಾಡುವದು ಮೂಲಸ್ಥಾನದಲಿ
ತಿಳಿಯಲೋ ತಿಳಿದ್ಹೇಳಲೋ
ಸೆಳವಿಗೆ ಬಿದ್ದು ನೀನು ಬಳಲಿ ಬಳಲಿ ಸತ್ತಿ     ||೧||

ಅಂಗವನರಿಯದೆ ರಂಗಿಲೆ ಹಾಡುವದು
ಸಂಗನೇ ಮುದಿಮಂಗನೇ
ಬಂಗಿ ಸೇದವರಂತೆ ಕೊಂಗಿ ಕವಿತೆ ನಿಂದು         ||೨||

ಆರ್ಥವನರಿಯದೆ ಮರ್ತ ಹಾಡುವದು
ಜಾಣನೇ ಮುದಿ ಕೋಣನೆ
ತುರ್ತ ನಮ್ಮಲ್ಲಿಗೆ ಬುದು ಶರ್ತಹಾಕುವದುಂಟೆ    ||೩||

ದೇಶದೊಳಗ ಇದು ಹೇಸಿ ಕವಿತೆ ನಿಂದು
ಬ್ಯಾಡಲೋ ಮಹಾ ಕೆಡಲೋ
ಬ್ಯಾಸರಾದಿತು ಶಿಶುನಾಳಧೀಶನಿಗೆ            ||೪||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೆಟ್ ವಿಮಾನಗಳು
Next post ನಗೆ ಡಂಗುರ – ೫೧

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…