ಹೋತೋ ಐಸುರ ಬಂತು ಮೊಹೋರುಮ
ನಿಂತು ಅಲಾವಿ ಖೇಲ ಖೇಲ                ||ಪ||

ಒಂಟಿ ಹೋಗಿ ಮೂಕಂಠ ಆದವೊ
ತಂಟೆದ ಅಲಾವಿ ಖೇಲ ಖೇಲ
ಗಂಟಿ ನುಡಿದವು ಮದೀನ ಶಹಾರದಿ
ಕುಂಟದಲಾವಿ ಖೇಲ ಖೇಲ                  ||೧ ||

ಸಿದ್ದಭೂಮಿಗೆ ಗುದ್ದಲಿ ಹಾಕಿ
ಮಧ್ಯದಲಾವಿ ಖೇಲ ಖೇಲ
ಕದ್ದು ಹೋಗದಿರು ಕರ್ಮದ ಹೊಳಿಯೊಳು
ಗೆದ್ದು ಅಲಾವಿ ಖೇಲ ಖೇಲ                   ||೨||

ತಾರುಣ ವರುಷ ಕಲಿ ಅವತಾರದಿ
ಕಾರಣ ಅಲಾವಿ ಖೇಲ ಖೇಲ
ಸಾರಿಬಂತು ಶಿಶುನಾಳಧೀಶನ
ಪೂರಣ ಅಲಾವಿ ಖೇಲ ಖೇಲ                 ||೩||
*****