ಬಂದೇವೈ ನಾವಿಂದಿನ ಸುಂದರ ಮಂದಿರಕೆ     ||ಪ||

ವಾರಿಗೆ ಹುಡುಗರು ದಿಮಿದಿಮಿ ಕುಣಿಯುತ
ದಾರಿಯೊಳಗ ಪದ ಹೇಳುತ ಸಾರಿ              ||೧||

ಹೊಸತರ ಕವಿತೆಯ ಕುಶಲದಿ ಪೇಳುತ
ವಸುಧಿಯೊಳಗ ಬಲು ರಸಮಾಡಿ ಪೇಳುತ      ||೨||

ಕಾಲಗಜ್ಜೆಯನು ಫಿಲಿಫಿಲಿ ಕುಣಿಸುತ
ಲೋಲ ಶಿಶುನಾಳದ ಬಾಲಕರೆಲ್ಲರು             ||೩||
*****