ಇಳಿಪಾಲಯ ಇಮಾಮರು
ಕಳಿಕಾಲ ಕಾಮನ || ಪ ||

ಕತ್ತಲ ಶಹಾದತ್ತ
ಮಥನವು ಎರಡಕೆ
ರತನಜ್ಯೋತಿ ರಾಜಿಸುವ ರಾಜ || ಅ. ಪ, ||

ಅರಿಶಿನ ಶರಗತ
ಹೊರಟಿತು ತಾಬೂತ
ಧರಿಗೆ ಮದೀನದಿ
ಮೆರದಿತು ಮೋರಮ
ತೆರದಿಟ್ಟ ಐಸುರ ಈಶ್ವರ || ೧ ||

ದಶದಿನಕೆ ಭೂಷಣ
ಶಿಶುನಾಳಧೀಶನ
ಅಸಮ ಕವಿತ ಆನಂದ ಅಮಮ ಇದು
ಹೊಸದು ರಿವಾಯತ
ಎಸೆವ ರೀತಿ || ೨ ||
*****