ಯಾತಕೋ ಪಾತಕಿಯೇ ಐಸುರ || ಪ ||

ಕಾತುನರಲಿಸುತ ಪ್ರೀತಿ ಇಲ್ಲದ ಮಾತು
ಕರ್ಬಲದೊಳಗಿದು ಕಾಳಗವಾಯಿತು || ೧ ||

ಧಾಮಶಪುರಪ್ಯಾಟಿ ಒಂದುದಿವಸಾಯ್ತೋ ಲೂಟಿ
ತಳಮಳಗೊಂಡಿತು ಭೂಮಿಯು ನಡುಗಿತು || ೨ ||

ಆಕಾಶ ತಾರಿ ಉದುರಿತು ಹಾರಿ
ಬಿಲ್ಲು ಬಾಣ ನೌಬತ್ತು ನಗಾರಿ || ೩ ||

ಕತ್ತಲ ಶಹಾದತ್ತ ಶಿಶುನಾಳಧೀಶನ
ಹೊಸತು ರಿವಾಯತು ಓದಿಕೊಂಡು ನೋಡು || ೪ ||
*****