ಆಲಜಾ ತಾ ತಾ ತರಗಿಡಿತೋ
ಕಾಸೀಮ ಮೌಲಾ || ಪ ||

ಪೀರ ಪೈಗಂಬರ ನಾಮದ ಸ್ಮರಣೆಯ
ಚಾರಯಾರ ಪರ ಧೀರಕುಮಾರ‌ಆಲಿ || ೦ ||

ಧಾಮಶಪುರವರ ಆ ಮಹಾಭಟರೊಳು
ಪ್ರೇಮದಿ ದಾಟಿದ ಕಠಿಣ ಕಲಹ ಅಲಿಜಾ || ೨ ||

ಧಾತ್ರಿಗಧಿಕ ಶಿಶುನಾಳಧೀಶನಲ್ಲೇ
ಸ್ತೋತ್ರಮಾಡಿ ಕೈಮುಗಿದು ಒಲಿದು ಅಲಿಜಾ || ೩ ||
*****