ಸ್ವಾಮಿ ಹೊರಟಾರು ಶರಣಾ
ಅವರಿಗೆ ಮೂಲಾತೋ ಕರ್ಬಲದ ರಣಾ || ಪ ||

ನೂರಾರು ಬಂಡಿಯಮೇಲ ಬಾಣಾ
ಹೌಹಾರಿ ಕುಂತಾನೋ ಹುಸೇನಾ || ೧ ||

ನೂರಾರು ಜನ ಕುದುರಿಯನೇರಿ ನಿಂತಾರಣ್ಣಾ
ಯಜೀದನ ಹಾದಿಗೆ ಹಚ್ಚಿತೋ ನಿಶಾನಾ || ೨ ||

ತಾಯಿಕರುಳು ಎಂಬುದು ಬಲು ಹೆಚ್ಚು
ಕುಂತು ಸೋಸ್ಯಾಳು ಭೂಮಿಯ ಮಣ್ಣಾ || ೩ ||

ಶಿಶುನಾಳ ಎಂಬುದು ಜಾಹೀರಾ
ಶರೀಫಸಾಹೇಬ ಮಾಡ್ಯಾನು ಕವಿಚಾತುರಾ || ೪ ||
*****