ಶ್ರೀ ನೀಲಕಂಠಗೆ ನಾರಿ ಒಲಿದು ಬೆಳಗಾರತಿ

 

ಶ್ರೀ ನೀಲಕಂಠಗೆ ನಾರಿ ಒಲಿದು ಬೆಳಗಾರತಿ ||ಪ ||
ಕಾಲಕರ್ಮವ ಗೆದ್ದು ಪ್ರಭುವಿನ
ಆಲಯದೊಳು ಮೆರೆಯುವ ಸದ್ಗುರು
ಬಾಲೆ ನೀಲಾಂಜನವನೆತ್ತಿ
ಸಾಲದೀವಿಗೆ ಬೆಳಕಿನಿಂದ || ೧ ||

ಪಂಚಜ್ಯೋತಿ ಪಂಚನೀತಿ
ವಂಚನೆದೂಡಿ ಬತ್ತಿ ಚಾಚಿ
ಮುಂಚೆ ಪ್ರಣಮ ಜಪಿಸುತ
ಸರ್ವಾಂಚಲಾಂಚ ವಾಂಚಿತಗೆ || ೨ ||

ಶ್ರೀ ಶಿಶುನಾಳಧೀಶನೊಳು ಎಸೆವ
ಶ್ರೀ ನೀಲಕಂಠ ಮೂರುತಿ
ಕುಸುಮ ರಜಿಪ ಶೋಭಿತ
ಅಸಮ ಪರಮಾನಂದಗೆ || ೩ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಲೆ ನೀಲಾಂಜನ ಬೆಳಗುಬಾ
Next post ಒಲವೇ… ಭಾಗ – ೪

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…