ಕಲ್ಲುಗಡಗಿಯ ಒಳಗೆ ಒಂದು ಹಕ್ಕಿ ಐತ್ರಿ
ಸಲ್ಲು ಸಲ್ಲಿಗೊಮ್ಮೆ ಅದು ಅಲ್ಲಾನ ನೆನಿತೈತ್ರಿ ಬಲ್ಲವರು ಹೇಳಿರಿ |ಪ|

ಮಾರಿ ಮೇಲಕ ಮಾಡಿದರ
ದೂರದಿಂದ ಕಾಣತೈತ್ರಿ |೧|

ತೋರಿ ತೋರದ್ಹಾಂಗ ಗುಪ್ತರೂಪದಿಂದೈತ್ರಿ
ಹೊರಗ ಒಳಗ ಕಾಣತೈತ್ರಿ |೨|

ಐದು ಮಾರ್ಗದಿಂದ ಇದು ಕೂಡಿ ಆವತೈತ್ರಿ
ಐದು ಕೂಡಿ ಏಕಾಕಾರವಾಗಿ ತೋರತೈತ್ರಿ |೩|

ಅರವಿನೊಳಗ ಮರವಿನೊಳಗ
ಹೊರಗ ಒಳಗ ಕಾಣತೈತ್ರಿ |೪|

ದೂರಮಾತ್ರ ಇಲ್ಲರಿ
ನಿರಾಕಾರದಲ್ಲಿ ನಿಜವಸ್ತು ಆಗತೈತ್ರಿ |೫|

ದೇಶದೊಳಗ ಶಿಶುನಾಳಧೀಶನೊಲವಿನಿಂದ
ಹೇಳಿಸಿ ವಸ್ತಾದ ದಯದಿಂದ |೬|

ಸಿಸ್ತಿಲಿಂದ ನಾವು ಹೇಳೇವಿರಿ
ಜನರೆಲ್ಲ ಕೇಳರಿ |೭|
*****