ಜಗದಳಿಲು

ಧರೆ ಬಿರಿದು ಉರಿಯುತಿದೆ
ಮೆರೆಯುತಿವೆ ಘಾತಕ ಶಕ್ತಿಗಳು
ಪರಿಹಾರ ತೋಚದ ಶ್ರೀ ಸಾಮಾನ್ಯನ
ತೊಳಲು ಕೊಚ್ಚಿ ಹೋಗುತಿದೆ

ನಾ ಮುಂದೆ ನೀ ಮುಂದೆನ್ನುತಾ…
ರಾರಾಜಿಸುತಿಹರು ಸಮಾಜ ಪೀಡೆಗಳು
ನ್ಯಾಯ… ನೀತಿ ಗಾಳಿಗೆ ತೂರಿ
ಅಟ್ಟಹಾಸದಿ ನಗುತ ಮೆರೆಯುತಿಹರು

ಯೋಜನೆ, ಯೋಚನೆಯ, ನೆಪದಲಿ
ಹಣದ ಪೋಲು ಮಾಡುತಿಹರು
ಉದ್ಧಾರ ಅಭಿವೃದ್ಧಿಯೆನ್ನುತಲಿವರು
ದಾರಿದ್ರ್‍ಯದಾಳದಲಿ ತಳ್ಳುತಿಹರು

ನಮ್ಮನು ಬಲಿಪಶುವಾಗಿಸಿ
ಏರುತಿಹರು ಸ್ವಾರ್ಥ ಚುಕ್ಕಾಣಿಕೆಯ
ಇಳಿಸಬೇಕು ನಾವುಗಳು ಒಂದಾಗಿ…
ಕಲಿಸಬೇಕು ನೀತಿ ಪಾಠವನು
ನಡೆಸಬೇಕು ಮನುಷ್ಯ ಪಥದ ದಾರಿಯಲಿ

ಶ್ರೀ ಸಾಮಾನ್ಯನು ಕೊರಗುತ ಮುದುಡದೆ
ಏಳಬೇಕು ಎಚ್ಚರವಾಗಬೇಕು
ಶಿಕ್ಷಣ-ಸಂಘಟನೆ ಅಪ್ಪಿಕೊಳ್ಳುತ…
ಸಾಗಬೇಕು ಹೋರಾಟದ ಹಾದಿ ಹುಡುಕುತ
ಸಮಾನತೆ ಕಹಳೆ ಮೊಳಗಿಸುತ….

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಿಟ್ಟಿಹುಳಗಳು ಎದ್ದಾವು ನೋಡು
Next post ಕಲ್ಲುಗಡಗಿಯ ಒಳಗೆ ಹಕ್ಕಿ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…