ಚಿತ್ರ: ಕಾಲಿನ್ ಬೆಹ್ರೆನ್ಸ್

ಈಗಾಗಲೇ ತಂತ್ರಜ್ಞಾನದಿಂದ ಏನೆಲ್ಲ ವಿಸ್ಮಯಗಳ ಸೃಷ್ಟಿಯಾಗುತ್ತಲಿದೆ. ಮುಂದಿನ ಶತಮಾನದಲ್ಲಿ ನಂಬಲಸಾಧ್ಯವಾದ ಕೌತುಕಗಳನ್ನು ಪ್ರಕಟಿಸುತ್ತದೆ. ಹೊಸ ಪೀಳಿಗೆಯ ಹಸು, ಕುರಿ, ಕೋಳಿ ಇತ್ಯಾದಿಗಳನ್ನು ತಯಾರಿಸಬಹುದು. ಇವು ನೈಸರ್ಗಿಕವಾಗಿ ಜನಿಸಿದವಾಗಿರುವುದಿಲ್ಲ. ಮನುಷ್ಯನು ಇವುಗಳ ವಂಶಾಣುಗಳಲ್ಲಿ ವ್ಯತ್ಯಾಸಗಳನ್ನು ಮಾಡಿ ಕೃತಕವಾಗಿ ನಿರ್ಮಿಸಿದ ಪ್ರಾಣಿಗಳಾಗಿರಬಹುದು.

ಒಂದು ಪ್ರಾಣಿಯ ವಂಶಾಣುವಿನಲ್ಲಿ (Gene) ಪರಿವರ್ತನೆ ಮಾಡಿ ನಮಗೆ ಎಂತಹ ರೀತಿಯ ಹೊಸ ಪ್ರಾಣಿಗಳನ್ನು ತಯಾರಿಸಬಹುದು. ಉದಾ: ಬಕೆಟ್ ಗಟ್ಟಲೇ ಹಾಲು ಕರಿಯುವ ಹಸುಬೇಕೆಂದರೆ ವಂಶಾಣು ವರ್ಗಾವಣೆಯ (Transgenic) ತಂತ್ರಜ್ಞಾನದಿಂದ ಅಂತಹ ಹಸುಗಳನ್ನು ಸೃಷ್ಟಿಸಬಹುದು. ತಂತ್ರಜ್ಞಾನದಿಂದ ಬೆಳೆಸಿದ ಹತ್ತಿಯು ಪಾಲಿಯೆಸ್ಟರ್ ಸಂಯುಕ್ತವನ್ನು ಉತ್ಪಾದಿಸಬೇಕೆಂದರೆ ಹಾಗೂ ಮಾಡಬಹುದು. ಆಡಿನ ಹಾಲಿನಲ್ಲಿ ‘ಹಿಮೋಫೀಲಿಯಾ ಎಂಪಿಸೀಮಾ’ ರೋಗಗಳನ್ನು ನಿಯಂತ್ರಿಸುವ ಪದಾರ್ಥಗಳಿರುತ್ತವೆ.

ಅಮೇರಿಕಾದಲ್ಲಿ ರೈತರು ಮೂವತ್ತು ದಶಲಕ್ಷ ಎಕರೆ ಭೂಮಿಯಲ್ಲಿ ವಂಶಾಣು ವರ್ಗಾವಣೆ ಆಧಾರಿತ ಸಮಸ್ಯೆಗಳನ್ನು ಈಗಾಗಲೇ ಬೆಳೆಸುತ್ತಿದ್ದಾರೆ. ಬರಲಿರುವ ಕಾರ್ಖಾನೆಗಳಲ್ಲಿ ಜೈವಿಕ ತಂತ್ರಜ್ಞಾನಗಳನ್ನು ಬಳಸಿ ಅನೇಕ ಪ್ಲಾಸ್ಟಿಕ್‌ಗಳು, ಎಂಜೈಮ್‌ಗಳು, ಪರ್ಯಾಯ ಇಂಧನಗಳು ತಯಾರಾಗುತ್ತವೆ. ವಿಶಿಷ್ಟವಾದ ಮರಗಳಿಂದ ಉತ್ತಮ ಮಟ್ಟದ ಕಾಗದ ಪಲ್ಫ್ ತಯಾರಾಗುವುದು ಕ್ಯಾಲಿಫೋರ್ನಿಯಾದ ಸಂಸ್ಥೆಯೊಂದು ಸಾಬೂನಿಗೆ ಬೇಕಾಗುವ ವಿಶಿಷ್ಟ ಬೀಜಗಳನ್ನು ತಯಾರಿಸುತ್ತದೆ. ವಂಶಾಣುವರ್ಗಾವಣೆಯ ತಂತ್ರಜ್ಞಾನವು ಔಷಧ ಶಾಸ್ತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತಲಿದೆ. ವರ್ಜಿನೀಯಾದ ಪಾಲಿಟೆಕಕ್ನಿಕ್ ಇನ್ಸ್‍ಟ್ಯೂಟ್ ಅಂಡ್ ಸ್ಟೇಟ್ ಯುನಿವರ್ಸಿಟಿಯಲ್ಲಿ ತಯಾರಿಸಿದ ಹಂದಿಗಳ ಹಾಲಿನಲ್ಲಿ ಅನೇಕ ರೋಗ ನಿವಾರಕ ಗುಣಗಳಿವೆಯಂತೆ. ಮನುಷ್ಯರ ರಕ್ತ ಹೆಪ್ಪುಗಟ್ಟಿಸುವಿಕೆಗೆ ಬೇಕಾಗುವ ಪ್ರೋಟೀನು – ಸಿ ಉಸಿರಾಟದ ತೊಂದರೆಗಳನ್ನು ತೊಡೆದು ಹಾಕುವ ‘ಆಲ್ಫಾ-೧’ ಯಟಿಟ್ರಿ ಪ್ಸಿನ್‌ಗಳು ಅದರಲ್ಲಿವೆ. ಒಂದು ಹಂದಿ ಪ್ರತಿವರ್ಷಕ್ಕೆ ಕರೆಯುವ ೩೦೦ ಲೀಟರ್ ಹಾಲಿನಲ್ಲಿ
ಶೇಕಡಾ ಹತ್ತನೆ ಒಂದು ಭಾಗದಷ್ಟು ಪ್ರೋಟಿನ್ -ಸಿ ಇರುತ್ತದೆಂದು ಕಂಡು ಹಿಡಿಯಲಾಗಿದೆ. ಮ್ಯಾಸಾಚ್ಯೂಟ್ಸ್‌ ಜೆಂಜೈಮ್ ಟ್ರಾನ್ಸ್‌ಜೆನಿಕ್ಸ್ ಕಾರ್ಪೊರೇಶನ್‌ನಲ್ಲಿ ಅಭಿವೃದ್ಧಿ ಪಡಿಸಿದ ಆಡುಗಳ ಹಾಲಿನಲ್ಲಿ ಕೆಲವೊಂದು ಕ್ಯಾನ್ಸರ್‌ಗಳು, ಹೃದಯರೋಗ, ಚರ್ಮರೋಗ ಮತ್ತು ಇತರ ಅನೇಕ ರೋಗಗಳನ್ನು ಶಮನಗೊಳಿಸುವ ಗುಣಗಳಿವೆ, ಎಂದು ವರದಿಯಾಗಿದೆ.

ವಂಶಾಣುವರ್ಗಾವಣೆಯ ತಂತ್ರಜ್ಞಾನವು ಎಷ್ಟರ ಮಟ್ಟಿಗೆ ವರವಾಗುವುದೋ ಅಷ್ಟೇ ಶಾಪವಾಗಿ ಪರಿಣಮಿಸಬಹುದೆಂಬ ಆತಂಕ ವಿಜ್ಞಾನಿಗಳಿಗಿದೆ. ನಿಸರ್ಗದ ಜೀವ ಜಗತ್ತಿನ ಸಮತೋಲನವನ್ನು ಹಾಳುಮಾಡಬಹುದು ಎಂಬ ಭಯ ಅವರದು. ಇಷ್ಟಾದ್ದಾಗ್ಯೂ ಸಸ್ಯಗಳಿಂದ ಹೆಚ್ಚು ಅಗ್ಗವಾದ ಪದಾರ್ಥಗಳನ್ನು ತಯಾರಿಸಬಹುದೆಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.
*****