ಜೀವನದ ದಾರಿ ನಾವು ಯೋಚಿಸಿದ ಹಾಗೆ ಯಾವಾಗಲೂ ಸುಖಕರವಾಗಿ ಇರುವುದಿಲ್ಲ. ಅದು ಹೂಗಳ ಹಾಸಿಗೆಯಲ್ಲ. ಕಲ್ಲು, ಮುಳ್ಳು, ಏರು, ತಗ್ಗು, ಪ್ರಪಾತ ಎಲ್ಲವೂ ಜೀವನದ ದಾರಿಯಲ್ಲಿದೆ. ಏನೇನೋ ತಿರುವುಗಳು, ಅನಿರೀಕ್ಷಿತ ಆಘಾತಗಳು, ಅಪಘಾತಗಳು, ಮನನೋಯಿಸುವ ಪ್ರ...

ತಂದೆಗೆ ಪುಟ್ಟನು ಕೇಳಿದನು ಕಲಿಸು ತನಗೆ ಈಜೆಂದನು ಹಳ್ಳದ ದಂಡೆಯ ಬಾವಿಗೆ ಹೋದರಿಬ್ಬರು ಜೊತೆ ಜೊತೆಗೆ ತಂದೆಯು ಧುಮುಕಿ ಈಜಿದನು ಪುಟ್ಟನು ಕುಳಿತು ನೋಡಿದನು ತಂದೆಯು ಕೈಯ ಹಿಡಿದೆಳೆದು ಸೊಂಟವ ಬಳಸಿ ನಡೆಸಿದನು ಪುಟ್ಟನು ಮೊದಲು ಚೀರಿದನು ಕೈ-ಕಾಲು ...

ನಾಡ ಕುದುರೆ ದಾರಿ ತಪ್ಪಿ ಕಾಡದಾರಿ ಹಿಡಿಯಿತು ಊರದಾರಿ ಕಾಣದಾಗ ಭಾರಿದಿಗಿಲು ಗೊಂಡಿತು ದೂರದಲ್ಲಿ ಕಾಡು ಕುದುರೆ ಇದನು ನೋಡಿ ನಕ್ಕಿತು ನಕ್ಕ ಕುದುರೆ ಕಂಡು ತಾನು ಧೈರ್ಯವನ್ನು ತಾಳಿತು ನಾಡಕುದುರೆ ಬಂದ ಸುದ್ದಿ ಪ್ರಾಣಿಗಳಿಗೂ ತಿಳಿಯಿತು ಹೊಸಬನನ್...

ಶತಮಾನಗಳ ಹಿಂದೆ ಲಜ್ಜೆಯ ಮುದ್ದೆಯಾಗಿ ಸಹನೆಗೆ ಸಾಗರವಾಗಿ, ಕ್ಷಮೆಗೆ ಭೂಮಿಯಾಗಿ, ತಾಳ್ಮೆಯ ಕೊಳ ತೊಟ್ಟು ದೇವಿಯ ಪಟ್ಟ ಪಡೆದು, ದಿನದಿನವೂ ಕತ್ತಲೆಯಲಿ ಅಸ್ತಿತ್ವ ಅಳಿಸಿಕೊಂಡು ಕನಸುಗಳ ಶೂಲಕ್ಕೇರಿಸಿ ಹೊಟ್ಟೆಯಲ್ಲಿ ಕೆಂಡದುಂಡೆಗಳ ಗಟ್ಟಿಯಾಗಿ ಕಟ್ಟ...

ಮರವೊಂದು ಬಿದ್ದಿದೆ ಬಿರುಗಾಳಿಗೆ ಅದು ದೊಪ್ಪೆಂದು ಬಿದ್ದಿತೊ ಸದ್ದಿಲ್ಲದೆ ಬಿದ್ದಿತೊ ಕೇಳಿದವರು ಇಲ್ಲ ಮುಂಜಾನೆಯೆದ್ದರೆ ಮರ ಬಿದ್ದಿದೆ ಉದ್ದಕೆ ಬುಡ ಮಗುಚಿ ಬಿದ್ದಿದೆ ಇನ್ನೆಂದು ಏಳದಂತೆ ಬಿದ್ದಿದೆ ಎಷ್ಟು ವರ್ಷದ ಮರ ಎಷ್ಟು ಯುಗ ಕಂಡ ಮರ ಮರವೆ ...

ದಿನ ಬೆಳಗಾಗದರೊಳಗಾಗಿ ಡಾ|| ಇಂದೇರ್ ಬಿರ್‌ಗಿಲ್ ವಿಶ್ವವಿಖ್ಯಾತಿ ಗಳಿಸಿರುವರು. ತೀರಾ ಉಲ್ಬಣಗೊಂಡ ಕಿಡ್ನಿ ಕ್ಯಾನ್ಸರ್‌ ರೋಗಿಗಳಿಗೆ ರೋಬಾಟ್ ಸರ್ಜರಿಗಳನ್ನು ಬಲು ಯಶಸ್ವಿಯಾಗಿ ನೆರವೇರಿಸುವ ಮೂಲಕ ಹೆಸರುವಾಸಿಯಾಗಿರುವರು. ಡಾ|| ಇಂದೇರ್ ಬಿರ್‌ಗಿ...

ಸೆಟ್ಟಾಗುವವರೆಗೆ ಹುಡುಗಿಯ ಹಿಂದೆ ಹುಡುಗ ಸಟ್ಟಾದ ಮೇಲೆ ಹುಡುಗನ ಹಿಂದೆ ಹುಡುಗಿ ಸೆಟ್ಟಾಗುವವರೆಗೆ ಹಲ್ಲು ದಾಳಿಂಬೆ ಕಾಳು ಸೆಟ್ಟಾದ ಮೇಲೆ ಹಿಂದಿನದೆಲ್ಲಾ ಓಳು ಸೆಟ್ಟಾಗುವವರೆಗೆ ಮೂಗು ಗಿಳಿಯ ಮೂಗು ಸೆಟ್ಟಾದ ಮೇಲೆ ಮೂಗು ಹಾಗೂ ಹೀಗೂ ಸೆಟ್ಟಾಗುವವ...

ನನ್ನಾಕೆಯಂತಾಕೆ ಲೋಕಕೆ ಒಬ್ಬಾಕೆ ಅವಳಿಗೆ ಅವಳೆ ಹೋಲಿಕೆ. ಓದಿಯೂ ಓದದ ದೂರದವಳಲ್ಲದ ಇವಳ ಮಾಡಿಕೊಂಡು ಬಂದೆ ಇವಳ ಜೋಡಿ ಸಂಸಾರ ನನಗೆ ಕತ್ತಿ ಮೇಲೆ ಸಾಮು ಮಾಡಿದಂಗಾಗುತಿಹುದು. ಮೇಲೆ, ನೋಡೋಕೆ ಇವಳು ಮೆತ್ತನ್ನಾಕೆ ಒಳಗೆ ಬಲು ಘಾಟಿಯೀಕೆ ಸದಾ ನೆರೆಕೆ...

ನುಜ್ಜುಗುಜ್ಜಾಗಿದೆ ಪ್ರೀತಿ ಸಿಲುಕಿ ಈ ಚಕ್ರದಡಿ ಬೂದಿಯಾಗಿದೆ ಸುಟ್ಟು ಬೆಟ್ಟದ ಆ ತಪ್ಪಲಲಿ ಅಗೋ ಅಲ್ಲಿ ತೂಗುತಿದೆ ಮರದಲಿ ಇಗೋ ಇಲ್ಲಿ ತೇಲುತ್ತಿದೆ ಹುಚ್ಚು ಹೊಳೆಯಲಿ. ಕೊಚ್ಚಿ ಹಾಕಿಹರು ಅದನು ಕೂಡು ರಸ್ತೆಯಲಿ ವಿಷಕೆ ವಶವಾಗಿ ರೋಷಕ್ಕೆ ಈಡಾಗಿ ಎ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...