ದಿನ ಬೆಳಗಾಗದರೊಳಗಾಗಿ ಡಾ|| ಇಂದೇರ್ ಬಿರ್‌ಗಿಲ್ ವಿಶ್ವವಿಖ್ಯಾತಿ ಗಳಿಸಿರುವರು.

ತೀರಾ ಉಲ್ಬಣಗೊಂಡ ಕಿಡ್ನಿ ಕ್ಯಾನ್ಸರ್‌ ರೋಗಿಗಳಿಗೆ ರೋಬಾಟ್ ಸರ್ಜರಿಗಳನ್ನು ಬಲು ಯಶಸ್ವಿಯಾಗಿ ನೆರವೇರಿಸುವ ಮೂಲಕ ಹೆಸರುವಾಸಿಯಾಗಿರುವರು.

ಡಾ|| ಇಂದೇರ್ ಬಿರ್‌ಗಿಲ್- ಮೂಲತಃ ಭವ್ಯ ಭಾರತೀಯರು. ಆದರೀಗ ಅಮೆರಿಕನ್ ಸರ್‍ಜನ್. ಇಲ್ಲಿನ ತಂಡದ ನೇತೃತ್ವ ವಹಿಸಿರುವರು. ಈವತ್ತು ಇವರೆಲ್ಲ ಮಹತ್ವದ ಸಾಧನೆ ಮಾಡಿರುವರು.

ಲಾಸ್ ಏಂಜೆಲಿಸ್‌ನ ಯು‌ಎಸ್‌ಸಿ ಇನ್‌ಸ್ಟಿಟ್ಯೂಟ್ ಆಫ್ ಯುರೋಲಜಿಯ (ಯು‌ಎಸ್‌ಸಿ ಮೂತ್ರಶಾಸ್ತ್ರ ಸಂಸ್ಥೆ) ವೈದ್ಯರ ತಂಡವು ಅತ್ಯಂತ ದೀರ್ಘವಾದ ಈ ಸರ್ಜರಿಯನ್ನು ಏಳು ಸಣ್ಣ ಸಣ್ಣ ಛೇದನಗಳು ಮತ್ತು ನಾಲ್ಕು ರೊಬೋಟ್ ಉಪಕರಣಗಳನ್ನು ಮಾತ್ರ ಬಳಸಿ ಮಾಡಿರುವುದು.

ಹೃದಯವನ್ನು ಮರು ಸಂಪರ್ಕಿಸುವ ಪ್ರಮುಖ ರಕ್ತನಾಳದಲ್ಲಿ ಕ್ಯಾನ್ಸರ್ ಪರಿಣಾಮವಾಗಿ ಮೂರನೆಯ ಹಂತದ ಹೆಪ್ಪುಗಟ್ಟುವಿಕೆ ಸಂಭವಿಸಿದ್ದರಿಂದ ಈ ಸರ್ಜರಿ ಅನಿವಾರ್‍ಯವಾಗಿತ್ತು. ಸಾಮಾನ್ಯವಾಗಿ ಇನ್‌ಫೆರಿಯರ್‌ವೀನಾ ಕಾವಾ (ಐವಿಸಿ) ಥ್ರೊಂಬೆಕ್ಟೊಮಿ ಎಂಬುದಾಗಿ ಕರೆಯಲಾಗುವ ಈ ಕ್ಲಿಷ್ಟ ಸರ್‍ಜರಿಯನ್ನು ದೊಡ್ಡ ಗಾಯ ಮಾಡಿ ಮಾಡಬೇಕಾಗುತ್ತದೆಂದು- ಇಂದೇರ್ ಬಿರ್‌ಗಿಲ್ ಸರ್ಜನ್ ಎಲ್ಲರ ಪರವಾಗಿ ಖಚಿತಪಡಿಸಿರುವರು.

ಮೂತ್ರನಾಳದ ಕ್ಯಾನ್ಸರ್ ಚಿಕಿತ್ಸೆಗಾಗಿ ಮಾಡಲಾಗುವ ಈ ಕ್ಲಿಷ್ಟ ಸರ್ಜರಿಯು ಮೂತ್ರನಾಳ ಸಂಬಂಧಿ ಒಪನ್ ಸರ್ಜರಿಗಳಲ್ಲೇ ಅತ್ಯಂತ ಸವಾಲಿನದಾಗಿದೆ. ಇಂಥಾದೊಂದು ಸರ್ಜರಿಯನ್ನು ಕೇವಲ ೭ ಸಣ್ಣ ಗಾಯ, ೪ ರೊಬೋಟ್ ಉಪಕರಣ ಬಳಸಿ ಮಾಡಿರುವುದು ಬಹು ದೊಡ್ಡ ಸಾಧನೆ ಎನ್ನಲಾಗಿದೆ.

ಇದೇ ತಂಡವು ಈ ತನಕ ಮೂತ್ರನಾಳದ ಕ್ಯಾನ್ಸರ್ ಹಾಗೂ ೩ನೆಯ ಹಂತದ ಥ್ರೋಯಿ ತಲುಪಿದ ೯ ರೋಗಿಗಳಿಗೆ ಈ “ರೊಬೋಟ್ ಐವಿಸಿ ಥ್ರೋಬೊಕ್ಟೊವಿ” ನಡೆಸಿದೆಯೆಂದು ಹೇಳಿರುವರು. ಇವರೆಲ್ಲ ಏಳು ತಿಂಗಳುಗಳ ಬಳಿಕ ಗಮನಿಸಿದಾಗ ಇವೆಲ್ಲರೂ ತಮ್ಮ ತಮ್ಮ ಸಮಸ್ಯೆಯಿಂದ ಪಾರಾಗಿದ್ದು, ರೋಗ ಲಕ್ಷಣವೇ ಕಾಣಿಸದಿರುವುದು ಚಿಕಿತ್ಸೆ ಯಶಸ್ವಿಯಾಗಿರುವುದಕ್ಕೆ ಹಿರಿಸಾಕ್ಷಿಯಾಗಿರುವರೆಂದು ವೈದ್ಯರಾದ ಡಾ| ಇಂದೇರ್ ಬಿರ್‌ಗಿಲ್ ಹೇಳಿರುವರು.
*****