ಸೆಟ್ಟಾಗುವವರೆಗೆ
ಹುಡುಗಿಯ ಹಿಂದೆ ಹುಡುಗ
ಸಟ್ಟಾದ ಮೇಲೆ
ಹುಡುಗನ ಹಿಂದೆ ಹುಡುಗಿ

ಸೆಟ್ಟಾಗುವವರೆಗೆ
ಹಲ್ಲು ದಾಳಿಂಬೆ ಕಾಳು
ಸೆಟ್ಟಾದ ಮೇಲೆ
ಹಿಂದಿನದೆಲ್ಲಾ ಓಳು

ಸೆಟ್ಟಾಗುವವರೆಗೆ
ಮೂಗು ಗಿಳಿಯ ಮೂಗು
ಸೆಟ್ಟಾದ ಮೇಲೆ
ಮೂಗು ಹಾಗೂ ಹೀಗೂ

ಸೆಟ್ಟಾಗುವವರೆಗೆ
ಪಾದ ಕಮಲದ ದಳ
ಸೆಟ್ಟಾದ ಮೇಲೆ
ದಳದಲಿ ಎರಡು ದಳ

ಸೆಟ್ಟಾಗುವವರೆಗೆ
ಕೆನ್ನೆ ತುಂಬ ಕೆಂಪು
ಸೆಟ್ಟಾದ ಮೇಲೆ
ಕಣ್ಣು ಮಾತ್ರ ಕೆಂಪು

ಸೆಟ್ಟಾಗುವವರೆಗೆ
ಹೇಳಿ, ಬನ್ನಿ, ಹೋಗಿ
ಸೆಟ್ಟಾದ ಮೇಲೆ
ಹೇಳೆ, ಹೋಗೆ, ಬಾರೆ

ಸೆಟ್ಟಾಗುವವರೆಗೆ
ಕಣ್ಣಲಿ ಹುಣ್ಣಿಮೆ ಚಂದ್ರ
ಸೆಟ್ಟಾದ ಮೇಲೆ
ಕಣ್ಣಲಿ ಧಗಧಗ ಸೂರ್‍ಯ

ಸೆಟ್ಟಾಗುವವರೆಗೆ
ಪ್ರೇಮದ ಅರ್‍ಥಕೆ ಹುಡುಕಾಟ
ಸೆಟ್ಟಾದ ಮೇಲೆ
ನಿಘಂಟಿರುವಾಗ ಯಾಕೆ ಹಠ?

ಸೆಟ್ಟಾಗುವವರೆಗೆ
ಟೂರಿಗೆ ದುಂಬಾಲು
ಸೆಟ್ಟಾದ ಮೇಲೆ
ರಜೆ ಎಲ್ಲಿದೆ ಹೇಳು?

ಸೆಟ್ಟಾದ ಮೇಲೆ
ಇದು ಹುಡುಗನ ಆಟ
ಇಷ್ಟಾದ ಮೇಲೆ
ಅಲ್ಲವೆ ಹುಡುಗಿಯ ಆಟ!?
*****