ನೋಡಿಕೋ ಮುಖವ ಕನ್ನಡಿಯಲ್ಲಿ, ಇಂಥದನೆ ಇನ್ನೊಂದ ಕೊಡು ಎಂದು ಕೇಳಿಕೋ. ನೀ ನಿನ್ನ ಮತ್ತೆ ಸೃಷ್ಟಿಸಿಕೊಳದೆ ಬಿಟ್ಟಲ್ಲಿ ಲೋಕವನೆ ವಂಚಿಸುವೆ, ಜೊತೆಗೆ ಹೆಣ್ಣೊಂದಕ್ಕೆ ತಾಯ್ತನವ. ನಿನ್ನ ಪೌರುಷದ ಬಿತ್ತನೆಗೆ ಒಪ್ಪದ ಕನ್ನೆ ಇರುವಳೇ ? ತಡೆಗಟ್ಟಿ ತನ್ನ...

ಬೆಳಗ್ಗೆ ಎದ್ದಾಗ ಕೇರಿಗೆ ಕಳೆ ಬಂದಿತ್ತು. ಅದೊಂದು ವಿಚಿತ್ರ ಕಳೆ, ಸಿದ್ದಣ್ಣನ ಮನೆಯಲ್ಲಿ ಮಂಜುಳ ಓಡಾಡುತ್ತಿದ್ದುದೇ ಒಂದು ಕಳೆಯಾದರೆ ಈಕೆ ಯಾರು ಏನು ಎಂದು ತಿಳಿದುಕೊಳ್ಳುವ ಕುತೂಹಲದಿಂದ ಉಳಿದವರಿಗೆ ಕಳೆಯೇರಿತ್ತು. ಕೆಲವರಂತೂ ಈಕೆ ಶಿವಕುಮಾರನಿ...

ಚಿಲುಮೆ ಕ್ಲಬ್ ಹೌಸ್ ಪ್ರಸ್ತುತ ಪಡಿಸುವ “ಕಾವ್ಯಯಾನ” ಕವಿತೆ ಕಾವ್ಯದ ಮಾತುಕತೆ ನಮ್ಮೊಂದಿಗೆ : ಎ. ಎನ್ ರಮೇಶ್ ಗುಬ್ಬಿ 2022ರ ಮಾರ್ಚ್ 19 ಶನಿವಾರ ಸಾಯಂಕಾಲ 7:30 ಗಂಟೆಗೆ ಬನ್ನಿ ಪಾಲ್ಗೊಳ್ಳಿ ಕಾರ್ಯಕ್ರಮದ ಲಿಂಕ್ 👇 https://ww...

ಚಿಂತಿಸದಿರು ಮನುಜ ಚಿಂತಿಸದಿರು ನೀ ಒಂಟಿ ಎಂದು ಕೊರಗದಿರು || ಪ || ಹೆತ್ತವರ ಮರೆತರೆಂದು ನೀವು ಕೊರಗದಿರಿ ಹೆತ್ತವರೆ ಹಾಕದಿರಿ ಶಾಪ ಮಕ್ಕಳಿಗೆ ನೀವು ಹೆತ್ತು ಹೊತ್ತು ಬೆಳೆಸಿದ ಕುಡಿಗಳಲ್ಲವೇ ಅವು ನಿಮ್ಮ ಕುಡಿಗಳಲ್ಲವೇ? ಹೆತ್ತವರ ನೋವು ಅರಿವಾಗ...

ಶಿಸ್ತಿರಬೇಕು ನಡೆಯಲ್ಲಿ ನುಡಿಯಲ್ಲಿ ಆಟ-ಪಾಠಗಳಲ್ಲಿ ಕಾಯದಲ್ಲಿ, ಕಾಯಕದಲ್ಲಿ. ಮಾನ ಹೋದೀತು-ಶಿಸ್ತಿಲ್ಲದಿರೆ ಉಡುಗೆ-ತೊಡುಗೆಗಳಲ್ಲಿ ವ್ಯಾಪಾರ-ವ್ಯವಹಾರಗಳಲ್ಲಿ ಹಣಕಾಸು ವಿಷಯಗಳಲ್ಲಿ ತಲೆ ಹೋದೀತು-ಶಿಸ್ತಿಲ್ಲದಿರೆ ಕಾಯ್ದೆ-ಕಾನೂನಿನಲ್ಲಿ ರೀತಿ-ನೀ...

ಸಂಸ್ಕೃತ ವಿಶ್ವವಿದ್ಯಾಲಯದ ಸ್ಥಾಪನೆಯಾಗಬೇಕೆಂದು ರಾಜ್ಯದ ಬಿ.ಜೆ.ಪಿ. ಸರ್ಕಾರ ಸಂಕಲ್ಪ ಮಾಡಿದೆ. ಆದರೆ ಈ ‘ಸಂಕಲ್ಪ’ ಸರ್ಕಾರ ಮತ್ತು ಸರ್ಕಾರದ ಸಮಾನ ಮನಸ್ಕರದಾಗಿದೆಯೇ ಹೊರತು ಸಮಸ್ತ ಸಾಂಸ್ಕೃತಿಕ ಲೋಕದ್ದಾಗಿಲ್ಲ; ಸಮಸ್ತ ಶಿಕ್ಷಣ ಕ್ಷೇತ್ರದ್ದೂ ಆ...

[ಮಕ್ಕಳ ಹಾಡು] ಅಜ್ಜಯ್ಯ ಗುಜ್ಜಯ್ಯ ಮಜ್ಜೀಗಿ ಕೊಡತೇನ ದಟ್ಟಿಯ ಪುಟ್ಟಿಯ ಕರೆದೊಯ್ಯ ದೊಡ್ಡಜ್ಜ ದೊಡ್ಡಯ್ಯ ತಂಬಾಕು ಕೊಡತೇನ ಪರಕಾರ್‍ದ ಮಮ್ಮಗಳ ಕರೆದೊಯ್ಯ ||೧|| ಬೂರಲ ಮರದಾಗ ಜೋರಾಗಿ ಕರದೇನ ಬುರ್‍ಲಜ್ಜ ಬುರ್ರಂತ ಹಾರ್‍ಹೋದೆ ಗುಡದಾಗ ಕೊಳ್ಳಾಗ ಕ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...