ವೃದ್ಧಾಪ್ಯ – ಧೈರ್ಯ

ಚಿಂತಿಸದಿರು ಮನುಜ ಚಿಂತಿಸದಿರು
ನೀ ಒಂಟಿ ಎಂದು ಕೊರಗದಿರು || ಪ ||

ಹೆತ್ತವರ ಮರೆತರೆಂದು
ನೀವು ಕೊರಗದಿರಿ ಹೆತ್ತವರೆ
ಹಾಕದಿರಿ ಶಾಪ ಮಕ್ಕಳಿಗೆ
ನೀವು ಹೆತ್ತು ಹೊತ್ತು ಬೆಳೆಸಿದ
ಕುಡಿಗಳಲ್ಲವೇ ಅವು ನಿಮ್ಮ ಕುಡಿಗಳಲ್ಲವೇ?

ಹೆತ್ತವರ ನೋವು ಅರಿವಾಗದು ಇಂದು
ತಿಳಿಯುವುದು ಆ ನೋವು ಮುಂದೆ
ತಮಗೂ ಮಕ್ಕಳಾಗಿ ಹೊರ ದೂಡಿದಂದು
ಚಿಂತಿಸದಿರಿ ನಿಮಗೂ ಜೀವನವಿದೆ ಮುಂದೆ
ನೋವಿನಲ್ಲೂ ನಗುವ ಕಾಣುತ್ತ ಸಾಗಿ ಎಂದೆಂದೂ

ನೀವು ನಿತ್ಯವೂ ಜೀವ ತೇಯುವುದು
ಮಕ್ಕಳ ಸುಮಧುರ ಜೀವನಕ್ಕಾಗಿ
ಆ ಮಕ್ಕಳೂ ಮುಂದೆ ಜೀವ ತೇಯುವರು
ತಮ್ಮ ಮಕ್ಕಳ ಸುಮಧುರ ಜೀವನಕ್ಕಾಗಿ
ಈ ಸತ್ಯವನ್ನು ಅರಿತಾಗ ನೀ ಮರುಗಬೇಕೇನು?

ಕೆಲವರ ಬಾಳಿನಲ್ಲಿ ಬರುವ ಈ ಕಹಿಯು
ತಿಳಿಯಿರಿ ಇದೊಂದು ಸಾಮಾನ್ಯ ಪ್ರಕ್ರಿಯೆಯು
ಸಹಜವಾಗಿ ನೋಡು ನೀನು ಇದನ್ನು
ನಮ್ಮಂತೆಯೇ ಇಹುದು ನಮ್ಮ ಮಕ್ಕಳ ಬಾಳ್ವೆಯು
ಎನ್ನುವ ಮರ್ಮ ತಿಳಿದರೆ ಸವಿ ಬಾಳು ನಿನ್ನದು

ನಿನ್ನ ಬಲವ ನೀ ನಂಬಿ ಬದುಕು
ಬಲವಿರುವ ತನಕ ಕಾಯಕವ ಬಿಡದಿರು
ಬಂದ ಆದಾಯವನ್ನ ಯಾರಿಗೂ ಹಂಚದಿರು
ಬಲವಿಲ್ಲದಾಗ ನಿನಗದು ಆಶ್ರಯದ ಸೂರು
ಅದು ಇಲ್ಲವೆಂದಾದರೆ ವೃದ್ಧಾಶ್ರಮಕ್ಕೆ ಸೇರು

ಚಿಂತಿಸದಿರು ಮನುಜ ಚಿಂತಿಸದಿರು
ನೀ ಒಂಟಿ ಎಂದು ಕೊರಗದಿರು || ಪ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿಸ್ತು
Next post “ಕಾವ್ಯಯಾನ” ಕವಿತೆ ಕಾವ್ಯದ ಮಾತುಕತೆ

ಸಣ್ಣ ಕತೆ

 • ತನ್ನೊಳಗಣ ಕಿಚ್ಚು

  ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

 • ಕೆಂಪು ಲುಂಗಿ

  ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

 • ಮಾದಿತನ

  ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…