ಸಮುದ್ರದಾ ಮ್ಯಾಗೆ ಅಲೆಗಳು ಎದ್ದಾವೋ ಎದ್ದು ಬಂದು ನಿನ್ನ ಮುಟ್ಟಿದವೊ| ಕನ್ನಡತಿ ಪಾದಗಳ ಮೇಲೇರಿ ಮರಳಿದವೋ| ನಿನ್ನ ಪಾದಗಳ ಮೇಲೇರಿ ಮರಳಿದವೋ //ಪ// ಹೊಂಬಾಳೆಗಳು ತೂಗಿ ಬನದ ಬಾಳೆಯು ಬಾಗಿ ತಂಪಾದ ಹೂಗಾಳಿ ಬೀಸಿದವೊ| ತಾಯೆ ನಿನಗಾಗಿ ಹಾಡ ಎರೆದಾವೋ...

ಇಂದು ಯೋಚನೆ ಕೊನೆಯಿಲ್ಲದೆ ಸಾಗಿತ್ತು. ಯಾವ ದಿಕ್ಕನ್ನೂ ಗುರುತಿಸಲು ಸಾಧ್ಯವಾಗದ ರೀತಿಯಲ್ಲಿ ಯೋಚಿಸುತ್ತಿದ್ದಂತೆ ವಿಷಯ ಹೆಚ್ಚು ಸಂಕೀರ್ಣಗೊಂಡಂತೆ ಯೋಚನೆಗೆ ಯಾವ ಸ್ವರೂಪವೂ ಬರುತ್ತಿರಲಿಲ್ಲ. ಈಗ ಅನೇಕ ದಿನಗಳಿಂದ ಮನಸ್ಸಿನಲ್ಲಿ ಉಂಟಾಗಿರುವ ಅಸ್ವ...

ವಿಧವೆಯೊಬ್ಬಳ ಕಣ್ಣು ಒದ್ದೆಯಾದೀತೆಂದು ಭಯವೆ, ಒಬ್ಬಂಟಿ ಬದುಕನ್ನೇಕೆ ತೇಯುವೆ ? ಸಂತಾನ ಭಾಗ್ಯವಿಲ್ಲದೆ ನೀನು ಸತ್ತಂದು ಜೊತೆ ಕಡಿದ ಹೆಣ್ಣಂತೆ ಈ ಲೋಕ ನರಳದೆ ? ಉಳಿದ ವಿಧವೆಯರೆಲ್ಲ ತಮ್ಮ ಮಕ್ಕಳ ಕಣ್ಣ ನೋಟದಲ್ಲೇ ಪತಿಯ ಪ್ರತಿಬಿಂಬ ಕಾಣುವರು ; ‘...

ಮಂಜುಳ ಮೊದಲ ದಿನವೇ ತರಗತಿ ತೆಗೆದುಕೊಂಡಳು. ಮಕ್ಕಳಿಗೆ ಪಾಠ ಮಾಡುವಾಗ ಆಕೆಗೆ ಆದ ಆನಂದ ಅಸಾಧಾರಣವಾದದ್ದು. ಏನೋ ಸಾರ್ಥಕತೆಯ ಸಂತೋಷ ಸಂಭ್ರಮ! ಎಲ್ಲರ ಮನಸೂ ಮಗುವೇ ಆಗಿದ್ದರೆ ಅದೆಷ್ಟು ಚನ್ನ! ಮುಗ್ಧ ಕುತೂಹಲಾಸಕ್ತಿಗಳ ನೆಲೆಯಾದ ಮಗುಮನಸ್ಸಿಗೇ ಮತ್...

ಕಲಿಯುಗದಲಿ ಸಾಗಿದೆ ನಿತ್ಯದ ಜೀವನ ಸ್ಥಾನ ಮಾನಗಳಿಗಾಗಿಯೇ ಹೋರಾಟ ಜೀವ ಹೋದರೂ, ಜೀವ ತೆಗೆದರೂ ಸಹ ನಡೆಯುತ್ತಿದೆ ನಿತ್ಯವೂ ಬಡಿದಾಟ || ಕಲಿಗಾಲ ಇದು ಕೊಲೆಗಾಲ || ಮಾನವೀಯತೆಯ ಮಮಕಾರವಿಲ್ಲ ಸಂಬಂಧಗಳ ಸಹವಾಸವಿಲ್ಲ ಕೂಗಿಕೊಂಡರೂ ಕೇಳುವುದಿಲ್ಲ ಮನದೊಳ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...