೧ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದರೆ-ಗೆಳತಿ ರೊಟ್ಟಿಯ ತಪ್ಪೇನೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದರೆ-ಗೆಳತಿ ತುಪ್ಪದ ತಪ್ಪೇನೆ ರೊಟ್ಟಿಯದು ತಪ್ಪಿಲ್ಲ ತುಪ್ಪದ ತಪ್ಪಿಲ್ಲ ಯಾರದು ತಪ್ಪಿಲ್ಲ-ಗೆಳೆಯ ಯಾರದು ತಪ್ಪಿಲ್ಲ ೨ ರೊಟ್ಟಿ ಜಾರಿ ತುಪ್ಪದಲ್...

ಪ್ರಿಯ ಸಖಿ, ಸಮಾಜವಾದಿಗಳನ್ನು ಸದಾ ಕಾಡುತ್ತಾ ಬಂದಿರುವ ವಿಷಯವೆಂದರೆ ಸಮಾಜ ಸುಧಾರಣೆಯನ್ನು ವ್ಯಕ್ತಿಯಿಂದ ಪ್ರಾರಂಭಿಸಬೇಕೋ, ಸಮುದಾಯದಿಂದ ಪ್ರಾರಂಭಿಸಬೇಕೋ ಎಂಬುದು. ಸಹಜವಾಗೇ ಇದಕ್ಕೆ ಪೂರ್ವಪರವಾದಗಳೂ ಇವೆ. ಸಮುದಾಯದಿಂದ ಸುಧಾರಣೆ ಆಗಬೇಕೆನ್ನುವ...

ನಿರ್ದೇಶಕನೊಬ್ಬ ನವ ನಾಯಕ ನಟನಿಗೆ ಹೇಳಿದ. “ನೀನು ಆ ದೊಡ್ಡ ಕಟ್ಟಡದಿಂದ ಧುಮುಕುವ ದೃಶ್ಯ ಬಾಕಿ ಇದೆ” ನಾಯಕ ನಟ ಹೇಳಿದ, “ಅಲ್ಲಿಂದ ಧುಮುಕಿದರೆ ನಾನು ಸತ್ತೇ ಹೋಗುವೆ.” ಅದಕ್ಕೆ ನಿರ್ದೇಶಕ ಹೇಳಿದನು. “ಇರಲಿ ಬ...

೨೬ ಜನವರಿ ತಾರೀಖಿನ ಮಹತ್ವ ಏನೆಂದು? ಒಬ್ಬ ಯುವಕನನ್ನು ಓರ್‍ವ ಹಿರಿಯರು ಕೇಳಿದರು. ದೇಶಕ್ಕೆ ಯೇನಾಯಿತೆಂದು ನನಗೆ ಖಂಡಿತ ಗೊತ್ತಿಲ್ಲ. ಆದರೆ ನನ್ನ ವೈಯಕ್ತಿಕ ಜೀವನದಲ್ಲಿ ಅಂದು ನನ್ನ ಗರ್ಲ್ ಫ್ರೆಂಡ್ ಜೊತೆ ಮೊದಲು ಡೇಟಿಂಗ್ ಮಾಡಿದ್ದೆ. ಅದು ನನಗ...

ನಮ್ಮ ದೇಶದಲ್ಲಿ ರಾಷ್ಟ್ರಧ್ವಜವೂ ಚಿಲ್ಲರೆ ರಾಜಕೀಯ ಪ್ರವೃತ್ತಿಗೆ ಬಲಿಪಶುವಾಗುತ್ತಿರುವುದು ಒಂದು ದುರಂತವೇ ಸರಿ. ಈ ದೇಶದಲ್ಲಿ ಬಡತನಕ್ಕೆ ಬರವಿಲ್ಲ; ಜನಸಂಖ್ಯೆಗೆ ಬರವಿಲ್ಲ; ಇಲ್ಲಿ ಮಹಲುಗಳು ಮಲೆತಿರುವಾಗ ಗುಡಿಸಲುಗಳಿಗೆ ಗರಬಡಿದಿರುತ್ತದೆ. ಗುಡ...

ಅರುಣನುದಯನೆ ನಿನ್ನ ಕರುಣ ಕಮಲದಿಂದಲಿ ಜಗದ ಜೀವ ಚೇತನವಾಗಿ ಸುಂದರ ರೂಪತಳೆದು ತೋರುತಿಹುದು ನಿತ್ಯ ಸತತ|| ದಿನದ ಪ್ರತಿಘಳಿಗೆಯನು ಬಿಡದೆ ನೀ ಬೆಳಗಿ ಬೆಳೆಯುತ ಲೋಕವನುದ್ದರಿಸುತಿರುವೆ| ಬೆಳೆದು ಬೆಳೆದಂತೆ ಸವೆದು ಇತರರಿಗೆ ಚಿಕ್ಕವನಾಗಿರುವಂತೆ ತೋರ...

ಈ ವಿಷಯ ಮನಸ್ಸಿನ ಭಾವಗಳಮ್ನ ಪ್ರತಿಫಲನಗೊಳಿಸುವ ಸೂಕ್ಷ್ಮಕ್ರಿಯೆಯಿಂದ ಕೂಡಿದೆ. ಜಗತ್ತಿನಲ್ಲಿ ಆತ್ಮಹತ್ಯೆಗೊಳಗಾಗುವ, ಆದ ಕೋಟ್ಯಾಂತರ ಜನರ ಧ್ವನಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ವ್ಯತ್ಯಾಸಗಳು ಕಂಡು ಬರುತ್ತವೆ ಎನ್ನುವದಕ್ಕೆ ಅಮೇರಿಕಾದ ಟೆ...

ಪ್ರಕೃತಿ ಎನ್ನನ್ಯಾಕೆ ಬರೆಸಿಹುದು ? ಯಾಕಾನು ಬರೆಯುವೆನೆಂದು ಕೇಳಿದೊಡೆ ಆಕಾನು ಯಾಕಷ್ಟು ತರುಲತೆಯ ಬೆಳೆಸಿಹುದೆಂ ದುಕೇಳಲು ಬೇಕು. ತರತರದ ಜೀ ವಕಾಮಕಪ್ಪಂತೇನೆಲ್ಲವನು ಬೆಳೆಸಿರ್ಪ ಪ್ರಕೃತಿಯೆ ಮತಿಯಾಗಿ ಬರೆಸಿಹುದೆನ್ನ – ವಿಜ್ಞಾನೇಶ್ವರ *...

ಏಕೆ ಜನುವ ಕೊಟ್ಟೆಯಮ್ಮಾ ! ಗಂಡಾಗಿ ಜನರ ದೇವರಿಗೆ ತಲೆ ಕೆಡಿಸಿಕೊಳ್ಳಲಿಕೆ. ನಾನು ಹುಟ್ಟಿದ ಕೂಡಲೆ ಮಾರಿದೇವಿಯ ಒಳಿತು ಕೋರಿ ಹರಕೆ ಕಟ್ಟಿ, ಕಾಲು ತೊಳೆದು ಬಿಟ್ಟರು ಸಾಕಿದ್ದಕ್ಕೆ ಸುಂಕವಾಗಿ ಪ್ರಾಣ ಕೇಳುವ ಜನರು. ನಾನು ಕೋಣ! ಉಬ್ಬಿ ಹೋದೆ ದುಡಿಸ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...