ಕನ್ನಡದ ಆಧುನಿಕ ಸಾಹಿತ್ಯ ಅನುವಾದ ಕಾರ್ಯದಿಂದಲೇ ಆರಂಭಗೊಂಡು ಮುಂದೆ ಸ್ವತಂತ್ರ ಸಾಹಿತ್ಯ ಬೆಳೆಯಲು ಕಾರಣವಾಗಿದೆ. ಸಂಸ್ಕೃತ ಮತ್ತು ಆಂಗ್ಲ ಸಾಹಿತ್ಯ ಕನ್ನಡದಲ್ಲಿ ಅನುವಾದ ಕ್ರಿಯೆಯನ್ನು ವಿಶೇಷವಾಗಿ ಆಕರ್ಷಿಸಿದ್ದನ್ನು ನಾವು ಸಾಹಿತ್ಯ ಇತಿಹಾಸದ ಪ...

ಗುಂಡ : “ನೀವು ಕೊಟ್ಟ ತಾಯತದ ಪ್ರಭಾವ ಚೆನ್ನಾಗಿದೆ ಸ್ವಾಮಿ.” ಶಾಶ್ತ್ರಿಗಳು : “ತಾಯತ ಕಟ್ಟಿದ ಮೇಲೆ ನಿಮ್ಮ ಹೆಂಡತಿಗೆ ಹಿಡಿದ ಭೂತ ಓಡಿ ಹೋಯಿತು ತಾನೆ” ಗುಂಡ : “ಇಲ್ಲ ಸ್ವಾಮಿಗಳೇ ನನ್ನ ಹೆಂಡತಿಯೇ ಓಡಿ ಹೋದ...

ಹೂವ ಕಂಡು ಗೋವ ಕಂಡು ನಿನ್ನ ನೆನೆದನು ಮಾವು ಕಂಡು ಸಾವು ಕಂಡು ನಿನ್ನ ಕರೆದೆನು ||೧|| ನನ್ನ ಕಂದಾ ನನ್ನ ಬಗಲ ಬರಿದು ಮಾಡಿದೆ ಅವ್ವ ಅವ್ವ ಅವ್ವ ಎಂದು ಬಯಲು ಮಾಡಿದೆ ||೨|| ನಿನ್ನ ತೂಗಿ ತೂಗಿ ಕಡಿಗೆ ಕುಣಿಗೆ ಒಯ್ದೆನೆ ಎದಿಯ ಹಾಲು ಸುರಿದು ಸುರಿ...

ಉಧೋ ಉಧೋ, ಎಂದು ಮಳೆ ಹುಯ್ಯುತಿತ್ತು. ಮಗು ಹೊರಗೆ ಹೋಗಿ ಆಟ ಆಡಲು ಬಯಸಿ, ಅಮ್ಮನ ಕೇಳಿತು- “ಅಮ್ಮಾ! ರಿಮೋಟ್ ಕೊಡು ಮಳೆ, ಗುಡುಗನ್ನು ನಿಲ್ಲಿಸುತ್ತೇನೆ” ಎಂದಿತು. “ಪುಟ್ಟಾ ಇದು ನಿನ್ನ ರಿಮೋಟಿನ ಪುಟ್ಟ ಪ್ರಪಂಚವಲ್ಲ. ಇದು ...

ರೊಟ್ಟಿ ಎಲ್ಲಿಯೂ ನಿಲ್ಲುವುದಿಲ್ಲ ಎಲ್ಲಿಗೂ ಹೊರಡುವುದಿಲ್ಲ ಅಳತೆಗಳ ಗೊಡವೆ ಇಲ್ಲ. ಹಸಿವೆಗೆ ಮಾತ್ರ ತಿರುತಿರುಗಿ ಅಳೆಯುವ ಕೆಲಸ. ಹುಡುಕುವ ಮೋಜು ಬೆಲೆ ಕಟ್ಟುವ ತುರ್ತು. *****...

ಸೊಸೆಗೆ ಅತ್ತೆಯೆಂದರೆಕೋ ಕಾಣೆ ಅರ್ಧ ಸತ್ಯ! ಅತ್ತೆಗೆ ಸೊಸೆಯೆಂದರೆಕೋ ಕಾಣೆ ಮಾತು ಮಾತಿಗೂ ತರ್ಕ|| ಅತ್ತೆ ಸೊಸೆಯ ಸಂವಾದವಂತೂ ಒಮ್ಮೊಮ್ಮೆ ಆಧಾರ ಸಹಿತ ಮತ್ತೊಮ್ಮೆ ಆಧಾರ ರಹಿತ| ಅತ್ತೆ ಸೊಸೆಯರ ಮಾತಿನ ಚಕಮಕಿ ಚಾರ್ತುಯತೆಯಂತೂ ಅದ್ಭುತ ಅಮೋಘ|| ಅತ...

ಸದಾ ನಾವು ವಾಯುಮಾಲಿನ್ಯ, ನೆಲಮಾಲಿನ್ಯ, ನದಿಮಾಲಿನ್ಯಗಳ ಬಗ್ಗೆ ಚಿಂತಿಸುತ್ತೇವೆ. ನೆಲದೊಳಗಿನ ನೀರಿನ ಆಕರಕ್ಕೇ ವಿಷ ಚೆಲ್ಲುತಿದ್ದೇವೆಂಬುದು ಗೊತ್ತೆ? ಕೆಳಗಿನ ಈ ಘಟನೆಗಳನ್ನು ಓದಿ: * ಅಮೇರಿಕಾ ಸಂಯುಕ್ತ ಸಂಸ್ಥಾನದ ನ್ಯೂಯಾರ್‍ಕ್ ಸಿಟಿಯಲ್ಲಿ ೧೯...

ನಾನಂದು ಕೃಷಿಯೆಂದು ನೆಡಲಾ ತೆಂಗನೊಂ ದನದು ತಪ್ಪೆಂದು ಕೂಡಿದ್ದೆ ಸಸ್ಯಗಳ ವನದಂತೆ ಸಾವಿರಕು ಮಿಕ್ಕಿ ಜಾತಿಗಳದುವೆ ಸಾನುರಾಗದಿ ಸಾವಯವವೆನಿಸಿತ್ತಂತೆನ್ನ ಕೃಷಿಕ ವನ ಬರಬರುತೆ ವ್ಯಾಪಿಸಿತೆನ್ನ ಬದುಕನ್ನೆ – ವಿಜ್ಞಾನೇಶ್ವರಾ *****...

ನನ್ನೂರ ಬಾಲೆ ರಸ ಕಾವ್ಯ ನವ್ವಾಲೆ ಸಿಹಿ ನೀರ ತರಲೆಂದು ಅಂಗಳಕ ಇಳಿದಳಂದರೆ… ಓಣಿಯ ಗಂಡು ಹೆಣ್ಣು ಒಟ್ಟಾಗಿ ತೇಜಃ ಪುಂಜವು ಕಂಡಂತೆ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತ ನಿಲ್ಲುವರು. ಅವಳೋ… ಕಂಡವರ ಕಣ್ಣುಗಳು ಕೆಟ್ಟದಿದು ಅನ್ನದ ಹಾಗೆ...

ಸಾನ್ ಗಾಬ್ರಿಯಲ್ ಊರು ಥಂಡಿ ಕಾವಳದಿಂದ ಇಷ್ಟಿಷ್ಟೆ ಹೊರತೋರುತ್ತಿದೆ. ಜನಗಳ ಮೈ ಬಿಸಿ ತಾಕಲೆಂದು ರಾತ್ರಿಯಲ್ಲಿ ಮೋಡಗಳು ಊರಿನ ಮೇಲೆ ಕವುಚಿಕೊಂಡು ನಿದ್ದೆ ಹೋಗಿವೆ. ಸೂರ್ಯ ಇನ್ನೇನು ಕಾಣಬೇಕು ಅನ್ನುವಾಗ ಕಾವಳದ ತೆರೆಯ ಹಚ್ಚಡ ಸುರುಳಿಸುತ್ತಿಕೊಳ್...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...