Month: September 2015

#ವಚನ

ಲಿಂಗಮ್ಮನ ವಚನಗಳು – ೨೯

0

ಪೃಥ್ವಿಯನೆ ಆದಿಯ ಮಾಡಿ, ಅಪ್ಪುವಿನಲ್ಲಿ ಗೋಡೆಯನಿಕ್ಕಿ, ಅಗ್ನಿಯನೆ ಅಪ್ಪುವಿನೊಳಗೆ ಹುದುಗಿಸಿ, ಅಗ್ನಿಯನೆ ಬೀಸಿ, ವಾಯುವನೆ ಬೀರಿ, ಆಕಾಶವನೆ ಹೊದಿಸಿ, ಸಹಸ್ರದಳ ಕಮಲವನೆ ಮೇಲು ಕಟ್ಟಕಟ್ಟಿ, ಬಯಲಮಂಟಪವ ಶೃಂಗಾರವ ಮಾಡಿ, ಒಡೆಯನಾಭರಣವ ಹಾರುತಿದ್ದೆನಯ್ಯ. ಒಡೆಯನಾಭರಣವ ಹಾರೈಸುವದ ಕಂಡು, ಹಡಪದಪ್ಪಣ್ಣನೆ ಕರ್ಪುರದ ಸಿಂಹಾಸನವಾಗಿ ನಿಂದರು. ಅದಕ್ಕೆ ಚನ್ನ ಮಲ್ಲೇಶ್ವರನೆ ಜ್ಯೋತಿರ್ಮಯಲಿಂಗವಾಗಿ ಬಂದು ನೆಲೆಗೊಂಡರು. ಜ್ಯೋತಿರ್ಮಯ ಲಿಂಗವು ಕರ್ಪುರವು ಏಕವಾಗಿ […]

#ಕವಿತೆ

ಗಝಲ್

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಈ ಸಂಜಿ ಈ ರಾತ್ರಿ ಬಂದೇ ಬರುವಿಯೆಂದು ಕಾದೆ ಮೌನದ ಬೆಳದಿಂಗಳು ಸುಮಧುರಯಾತನೆ ಏಕಾಂಗಿ ಏನಿದು ಕಾತುರ ಏನಿದು ಬೇಸರ ಎಂತಿಷ್ಟೋ ಉಸಿರು ಬಾಗಿಲು ತೆರೆದಿದೆ ತೋರಣ ಕರೆದಿದೆ ಬಾಬಾ ಎಂದು ಅದರುವ ತುಟಿಗಳು ಕಂಬನಿ ಕಣ್ಣುಗಳು ಕಾದಿವೆ ಜಾರುಗೊಡುವುದಿಲ್ಲ ಈ ಹನಿಗಳನು ಬತ್ತಿಸುವುದಿಲ್ಲ ತುಟಿ ವಸಂತ ಗಿಡಗಿಡಕೆಲ್ಲ ಆಕ್ರಮಿಸಿ ಜೀಕಾಡಿ ಹರೆನಗುವಾಗ ನೀನಲ್ಲಿ ಆ […]

#ಕವಿತೆ

ಗಾಂಧೀಜಿಗೆ

0

ನೂರಐವತ್ತೈದು ವರುಷಗಳು ದಾಸ್ಯದಲೆ ಬಿದ್ದು ಭಾರತ ತನ್ನ ಆತ್ಮವನೆ ಮರೆತಿಹುದು ತನ್ನ ಶಕ್ತಿಯಲಿಂದು ಇನಿತಾದರೂ ಅದಕೆ ನಂಬುಗೆಯು ಉಳಿದಿಲ್ಲ! – ಕೂಪದಲಿ ಉರುಳಿಹುದು! ಮತ್ತೆ ನಮ್ಮೀನಾಡು ಕತ್ತಲಿಂ ಹೊರಗೆದ್ದು ಬೆಳಕಿನಲಿ-ಸ್ವಾತಂತ್ರ್‍ಯ ಜ್ಯೋತಿಯಲಿ ನಲಿಯುವುದು ಉಂಟೇನು ಎಂದೆನುವ ಶಂಕೆಗಳು ಎದ್ದೆದ್ದು ಮನವ ಹಿಂಡುತಲಿಹುವು-ಹೃದಯ ಸಿಡಿಯುತಲಿಹುದು! ಹೊರಗೆನಿತು ಕುತ್ತಗಳು ಬಂದರೂ ಬರಬಹುದು ಆತ್ಮವನು ಕತ್ತಲೆಯ ಮುಸುಕು ಮುತ್ತದ ಹಾಗೆ […]

#ಇತರೆ

ನಾಲಿಗೆ ಜಾರಿದರೆ?

0

ಪ್ರಿಯ ಸಖಿ, ಶಿಷ್ಟತೆಯನ್ನು ಮೈಗೂಡಿಸಿಕೊಂಡಿರದ ನೀಚರು ತಮ್ಮದೆನಿಸುವ ಎಲ್ಲ ವಸ್ತುಗಳನ್ನು ಕೆಟ್ಟ ಕೆಲಸಗಳಿಗಾಗಿ, ತಮ್ಮ ಚಟ, ಸ್ವಾರ್ಥಸಾಧನೆಗಾಗಿ ಬಳಸಿಕೊಳ್ಳುತ್ತಾರೆ. ಅದರಲ್ಲಿ ಮುಖ್ಯಪಾತ್ರ ವಹಿಸುವುದು ನಾಲಿಗೆ. ಪುರಂದರದಾಸರ ಈ ಹಾಡನ್ನು ನೀನೂ ಕೇಳಿರಬಹುದು. ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ವಿಚಾರವಿಲ್ಲದೇ ಪರರ ದೂಷಿವುದಕ್ಕೆ ಚಾಚಿಕೊಂಡಿರುವಂಥ ನಾಲಿಗೆ ಎನ್ನುತ್ತಾರೆ. ಕೆಲನೀಚರಿಗೆ ಎಲ್ಲದರಲ್ಲಿಯೂ ತಪ್ಪು ಹುಡುಕುವ, […]

#ಕವಿತೆ

ನಾಯಿ ಹೇಗೆ ಬೊಗಳುವುದು?

0
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು.ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ನಾಯಿ ಹೇಗೆ ಬೊಗಳುವುದು ಬೌ ಬೌ ಬೌ ಬೆಕ್ಕು ಹೇಗೆ ಕೂಗುವುದು? ಮ್ಯಾವ್ ಮ್ಯಾವ್ ಮ್ಯಾವ್, ಶಂಖ ಎತ್ತಿ ಊದಿದರೆ? ಭೋಂ ಭೋಂ ಭೋ ದೋಸೆ ಬೆಂದ ವಾಸನೆ ಘಂ ಘಂ ಘಂ. ತಬಲವನ್ನು ಹೊಡೆದರೆ? ಧಿಂ ತಕ ಧಿಂ ಆಟಂ ಬಾಂಬ್ ಹಚ್ಚಿದರೆ? ಢಂ ಢಂ ಢಂ. ಅಕ್ಕ ಡ್ಯಾನ್ಸು ಮಾಡುವಳೂ ತಿಕಿಟ ತಿಕಿಟ […]

#ಕವಿತೆ

ಎಷ್ಟು ಕಣ್ಣು ಹೊಡೆದರೂ

0
ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)

ಹುಣ್ಣಿಮೆ ಚಂದ್ರನಿಗೆ ತಾರೆಯರು ಎಷ್ಟು ಕಣ್ಣು ಹೊಡೆದರೂ ಅವರು ಅವನ ಕಣ್ಣಿಗೇ ಬೀಳಲಿಲ್ಲ ಬೆಳ್ಳಿ ಬೆಳದಿಂಗಳ ಹಾಲಲ್ಲಿ ಬೆತ್ತಲೆ ಮೀಯುತ್ತಿದ್ದ ಭೂಮಿ ಮೇಲೆ ನೆಟ್ಟ ಅವನ ಕಣ್ಣು ಬೆಳಗಾಗುವವರೆಗೂ ಅತ್ತಿತ್ತ ಹೊರಳಲಿಲ್ಲ. *****

#ಕವಿತೆ

ಜಾರಿಹೋದ ಉಂಗುರಕೆ

0
Latest posts by ಮುತ್ತಣ್ಣ ಐ ಮಾ (see all)

ನಮ್ಮ ಪ್ರೇಮದ ದಾರಿ ಕೊರಕಲನು ಸಮವಾಗಿ, ದೂರವನು ಹತ್ತಿರಿರಿಸಿ- ಸಂದ ಭಾಗ್ಯದ ಚೆನ್ನುಗನಸನ್ನು ನೆನೆಸನ್ನು ತೋರಿದುಂಗುರವ ಕಳೆದೆ! ಸಂಜೆ ತಾರೆಯ ನೋಡಿ ಅದರ ಕಾಂತಿಯ ಹಳಿದ ಸರಸಿ ಉಂಗುರವವಳು; ಮೊಲ್ಲೆ ಮಲ್ಲಿಗೆ ವರ್ಣದೀಪ್ತಿಯನು ತಾಕಂಡು ಮುಡಿಯಲೆಂದಳು ನನಗೆ! ರಮಣನಂದೆನಗಿತ್ತ ಅಂದಿನಾ ದಿನದಿಂದ ನನ್ನೊಡನಾಡಿ ಅವಳು, ಪತಿಭವನ ವಾರ್ತೆಯನು ಪತಿಯೊಲುಮೆ ತೆರವನ್ನು ಅಂದವಳವಳೆ ನನಗೆ! ಕ್ಷಣಕ್ಷಣಕು ದಿನದಿನಕು […]

#ವಚನ

ಲಿಂಗಮ್ಮನ ವಚನಗಳು – ೨೮

0

ಏನೇನು ಇಲ್ಲದಾಗ ನೀವಿಲ್ಲದಿದ್ದರೆ, ನಾನಾಗಬಲ್ಲೆನೇ ಅಯ್ಯ? ಆದಿಅನಾದಿ ಇಲ್ಲದಂದು ನೀವಿಲ್ಲದಿದ್ದರೆ, ನಾನಾಗಬಲ್ಲೆನೇ ಅಯ್ಯ? ಮುಳುಗಿ ಹೋದವರ ತೆಗೆದುಕೊಂಡು ನಿಮ್ಮ ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು, ರಕ್ಷಣೆಯ ಮಾಡಿದ ಶಿಸುವಾದ ಕಾರಣ ಹಡಪದಪ್ಪಣ್ಣನೆ ಎನ್ನ ಕರಸ್ಥಲಕ್ಕೆ ಲಿಂಗವಾಗಿ ಬಂದು ನೆಲೆಗೊಂಡರು. ಚನ್ನಮಲ್ಲೇಶ್ವರನೆ ಎನ್ನ ಮನಸ್ಥಲಕೆ ಪ್ರಾಣವಾಗಿ ಮೂರ್ತಗೊಂಡರು ಆ ಕರಸ್ಥಲದ ಲಿಂಗವನರ್ಚಿಸಿ ಪೂಜಿಸಿ, ವರವ ಬೇಡಿದರೆ, ತನುವ […]

#ಕವಿತೆ

ಅಧಿಕಾರ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ನನ್ನವಳ ಕಣ್ಣೀರು ಕಂಡಾಗ ನನ್ನ ಹೃದಯ ಝಲ್ಲೆಂದಿತ್ತು ಅದೇ ಮರುದಿನ ಚಿತ್ತಾರದ ಗೊಂಬೆಯಂತೆ ಚಿತ್ತರಿಸಿಕೊಂಡು ನನ್ನ ಕೊರಳಿಗೆ ಕೈ ಹಾಕಿದಾಗ ಮೈ ಝುಂ (ಜುಂ) ಅಂದಿತು ವಿಚಾರಿಸಿದೆ: ಇವೆರಡರ ಸಂಕೋಲೆ ಬೇಡವೆಂದು ತಲೆ ಕೊಡವಿದ್ದೇ ಕೊಡವಿದ್ದು ಬೇರ ವಿಚಾರ ಮಾಡಿದ್ದೇ ಮಾಡಿದ್ದು, ಊಹೂಂ – ಮನಸ್ಸು ಗೊದಮೊಟ್ಟೆಯಂತೆ…. ಹುಚ್ಚನಂತಾಗಿ ಸಂಕೋಲೆ ಕೊಡವಿ ಹಾಕಲು ಸೋತಂತಾದಾಗ ನನಗರಿವಿಲ್ಲದೇ […]

#ಕವಿತೆ

ವೀರಗಲ್ಲು

0

ನಿಲ್ಲೆಲವೊ ಪಯಣಿಗನೆ ನಿಲ್ಲು! ನಿಲ್ಲು! ಮುಂದೆಲ್ಲಿ ಸಾಗುತಿಹೆ ನಮ್ಮ ಮರೆತು ಎಲ್ಲರಂತೆಯೆ ಕಿವುಡೆ ನಿನ್ನ ಮನಸು -ಕೂಗಿದೆ ವೀರಗಲ್ಲು!   ೧ ಒಟ್ಟಿಹರು ಒಂದೆಡೆಗೆ ನಮ್ಮನೆಲ್ಲ ಉಸಿರಾಡಲೆಡೆಯಿಲ್ಲವೆಮ್ಮ ಬಾಳು! ಆರು ನಾವೆಂಬುದನೆ ಅರಿಯದಿಂತು ಬಸವಳಿದು ಬಿದ್ದಿಹೆವು!   ೨ ಜೀವ ತೆತ್ತವರೆನಿತೊ ಜನಗಳಾವು ಜನರ ಬಾಳುವೆಗಾಗಿ ತೆತ್ತು ಬಾಳು ಮೌನದಲಿ ಉರುಳಿದೆವು-ಜನರು ಬಂದು ತುಳಿಯುವರು ಸಂತಸದಿ!   ೩ ಅಂದೆಮ್ಮ […]