ಅಧಿಕಾರ

ನನ್ನವಳ ಕಣ್ಣೀರು ಕಂಡಾಗ
ನನ್ನ ಹೃದಯ ಝಲ್ಲೆಂದಿತ್ತು
ಅದೇ ಮರುದಿನ ಚಿತ್ತಾರದ ಗೊಂಬೆಯಂತೆ
ಚಿತ್ತರಿಸಿಕೊಂಡು ನನ್ನ ಕೊರಳಿಗೆ ಕೈ
ಹಾಕಿದಾಗ ಮೈ ಝುಂ (ಜುಂ) ಅಂದಿತು
ವಿಚಾರಿಸಿದೆ:
ಇವೆರಡರ ಸಂಕೋಲೆ ಬೇಡವೆಂದು
ತಲೆ ಕೊಡವಿದ್ದೇ ಕೊಡವಿದ್ದು
ಬೇರ ವಿಚಾರ ಮಾಡಿದ್ದೇ ಮಾಡಿದ್ದು,
ಊಹೂಂ – ಮನಸ್ಸು ಗೊದಮೊಟ್ಟೆಯಂತೆ….
ಹುಚ್ಚನಂತಾಗಿ
ಸಂಕೋಲೆ ಕೊಡವಿ ಹಾಕಲು
ಸೋತಂತಾದಾಗ
ನನಗರಿವಿಲ್ಲದೇ ಅವಳ ಬಳಿಸಿದೆ.
ಅವಳು ನನ್ನ ಸಡಲಿಕೆ ನೋಡಿ
ಕಣ್ಣೊಳಗೇ ನಕ್ಕು
ಅಧಿಕಾರ ಚಲಾಯಿಸಿಯೇ ಬಿಟ್ಟಳು.
*****