ನಾಯಿ ಹೇಗೆ ಬೊಗಳುವುದು
ಬೌ ಬೌ ಬೌ
ಬೆಕ್ಕು ಹೇಗೆ ಕೂಗುವುದು?
ಮ್ಯಾವ್ ಮ್ಯಾವ್ ಮ್ಯಾವ್,
ಶಂಖ ಎತ್ತಿ ಊದಿದರೆ?
ಭೋಂ ಭೋಂ ಭೋ
ದೋಸೆ ಬೆಂದ ವಾಸನೆ
ಘಂ ಘಂ ಘಂ.
ತಬಲವನ್ನು ಹೊಡೆದರೆ?
ಧಿಂ ತಕ ಧಿಂ
ಆಟಂ ಬಾಂಬ್ ಹಚ್ಚಿದರೆ?
ಢಂ ಢಂ ಢಂ.
ಅಕ್ಕ ಡ್ಯಾನ್ಸು ಮಾಡುವಳೂ
ತಿಕಿಟ ತಿಕಿಟ ಥೈ,
ನಮಗೆ ಅಮ್ಮ ಭಾರತ
ಜೈ ಜೈ ಜೈ.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.