ಅಂತರಂಗದ ಕದವ ತೆರೆಯಿಸೊ ಅಂತರಾತ್ಮ ವಾಣಿಯನಾಲಿಸು ಅಂತಕಾಂತನ ಕೃಪೆಯ ನೆಳಲಲಿ ಚಿಂತಾತ್ಮನ ಕೊನೆಗಾಣಿಸು || ಚಿತ್ತ ಚಿತ್ತಾರ ಬಿತ್ತರ ಬಣ್ಣ ಬದುಕಿನ ಕೆಡುಕಿಗೆ ನೀನು ನಾನು ಎಲ್ಲರಿಲ್ಲಿ ಮೃತ್ಯುಗೈಯಮಣ್ಣ ಬಿಂದಿಗೆ || ಬಿಸಿಲಗುದುರೆಯ ಸವಾರಿಯಲ್ಲಿ ...

ಗಣಕ-ತಂತ್ರಜ್ಞಾನವು ಜನಪ್ರಿಯವಾಗುತ್ತಿರುವ ಕಾಲ ಇದಾಗಿರುವುದಿಂದ ಮಾಹಿತಿ ಸಂಗ್ರಹ ಮತ್ತು ಒದಗಿದ ಮಾಹಿತಿಯನ್ನು ಆಯಾ ಆವಶ್ಯಕತೆಗಳಿಗೆ ಆನುಗುಣವಾಗಿ ವಿಭಜಿಸಿ ನೋಡುವ ತಂತ್ರವೂ ಕೈಗೆಟುಕುವಂತಿದೆ. ಸಾಹಿತ್ಯದ ಸಂದರ್ಭದಲ್ಲಿಯೂ ಈ ರೀತಿಯ ವಿಭಜನೆಯ ಕ್...

ಇನಸ್ಪೆಕ್ಟರ ದಯಾನಿಧಿ ವನಗಾವಲಧಿಕಾರ ||ಪ|| ಘನಸಿರಿಯ ಪರಿ ಅರಣ್ಯದಿ ಶೋಭಿತಹ ಜುರ್ಬಿಶರಿಯುತಾಧೀಶನ ಪದಾ ||೧|| ಹಮ್ ದೇಖಾ ತುಮ್ ಲೈಯನ್‍ತು ದೋದಿನ್ ಕರತೆ ಜಾವಿದಾ ಸುಮ್ಮನೆ ಸಂದಿದೆ ನಾ ಪೇಳುವೆ ಲಾಲಿಸು ಹಿಮಕರ ಕಷ್ಟದಿ ಮುನಿದಾ ||೨|| ಶಿಶುನಾಳ ...

ನನ್ನ ತಾಯಿ ಕಡೆಯ ಸಂಬಂಧಿಕರಿವರು, ಇದ್ದಿಲಿನಂತೆ ಕಗ್ಗತ್ತಲನ್ನು ಉಗಿಯಬಲ್ಲ ಮಹಾ ದರಿದ್ರರಂತಿದ್ದರು. ಹೆಂಡದಾಸೆಗೆ ದಿನ್ನೆ ಬಯಲಿನ ಪೊದೆಗಳಲ್ಲಿ ಇಸ್ಪೀಟು ಆಡಲು ಬರುವ ಗಂಡಸರ ಜೊತೆ ಮಲಗಿ ಎದ್ದದ್ದನ್ನು ಎಷ್ಟೋ ಸಲ ನೋಡಿದ್ದೇನೆ. ಒಂಟಿಗಿಡದ ಪನ್ನೀ...

ಅಕ್ಕ ನೀ ಕೇಳವ್ವ ತಂಗೀ ನೀ ಬಾರವ್ವ ಸಂವಿದಾನ ತಿಳಿಯವ್ವ || ಹೆಣ್ಣಾಗಿ ಹುಟ್ಟಿದ್ದಿ ಹಣ್ಣಾಗಿ ಬಾಳಿದ್ದಿ ಕೂಸು ಗಂಡನ್ನ ಸಾಕಿ ಸಂಸಾರ ಮಾಡಿದಾಕಿ || ಜಗವೆಲ್ಲ ತಿಳಿದೈತೆ ತಲಿಯಾಗೆ ಗ್ಯಾನೆಐತೆ ಘನ ಬಾಳ ಬಾಳಿದಾಕಿ ಮುಜುಗರ ಬಿಡುಬಾಕಿ || ಗಂಡಂಗೆ ಹ...

ಸ್ಫರದ್ರೂಪಿ ಯವಕನೊಬ್ಬ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉನ್ನತ ಅಧಿಕಾರಿಯಾಗಿದ್ದ. ಅವನು ತನ್ನ ತಾಯಿ ತಂದೆ ಸಂಬಂಧಿಕರೊಂದಿಗೆ ಬಂದು ಆ ಚೆಲುವಾದ ಹುಡುಗಿಯನ್ನು ನೋಡಿದ. ಅವಳ ಮಾತು, ಅರ್ಹತೆಗಳೆಲ್ಲ ಅವನಿಗಿಷ್ಟವಾದವು. ಹುಡುಗಿಯೂ ಅವನನ್ನು ಮೆಚ್ಚಿಕ...

ಕುಸುಮವೊಂದು ಉಲ್ಲಾಸದಿಂದ ಅರಳಿನಿಂತು ನಕ್ಕಿತು | ನಭದ ನೀಲಿ ಬಣ್ಣ ಕಂಡು ನಾನೇ ಚೆಲುವೆ ಎಂದಿತು | ಇಳೆಯ ಮೇಲಣ ಕೊಳೆಯ ಕಂಡು ಹಮ್ಮಿನಿಂದ ಅಣಕಿತು | ಸುಳಿದು ಸೂಸೋ ತಂಗಾಳಿಗೆ ಒನಪಿನಿಂದ ಬಳುಕಿತು | ಹಾರಿ ಬಂದ ದುಂಬಿಯುಸಿರು ಮಧುರ ಸುಧೆಯೆ ಎಂದಿತ...

ವಾರಿಜಮುಖಿ ದೊಡ್ಡಶಹರ ಹುಬ್ಬಳ್ಳಿಯೊಳು ಕೋರಿ ಗಂಗಪ್ಪ ಸಾವುಕಾರನು ||ಪ|| ಧಾರುಣಿಯೊಳು ಸಣ್ಣ ಊರು ಕರಡೀಗುಡ್ಡ ಹಾರೈಸುತ ವ್ಯವಹಾರಕ್ಹೋಗಿ ಒಬ್ಬ ವೀರ ಜಂಗಮನ ಹೇಣತಿ ಕೆಣಕಲು ಮಾರಿಗೋಲಿಯೊಳು ಮರಣಹೊಂದಿದಾ ||ಅ.ಪ.|| ಸನುಮತಿಯಲ್ಲಿ ಸಾಧು ಸಜ್ಜನ ಸಂಪ...

ಅವ್ವ ರಾತ್ರೆಯೊಂದು ಗಳಿಗೆ ಎದು ಹಾಡಿಕೊಳ್ಳುತ್ತಾಳೆ; ಅವರೆ ಹೊಲದಲ್ಲಿ ಗೇಯುವಾಗ ಬಿದ್ದ ಹಗಲುಗನಸೇ, ಆ ಕ್ಷಣದ ದುಃಸ್ವಪ್ನವನ್ನು ಶಿಕ್ಷಿಸು, ದಮನಗೊಳಿಸೂ ಅವನ ಕ್ರಾಂತಿಗೀತೆಯನ್ನು, ಬೂಟಿನಿಂದ ಚಿಮ್ಮುವ ನೋವಿನ ರಕ್ತವನ್ನು, ನೆಲದ ನೈದಿಲೆಗಳಲಿ ಕಾ...

ಹಳ್ಳೀಯೆ ನಮ ದೇಶ ಪಂಚಾಯ್ತಿ ನಮ ಕೋಶ || ನಮ್ಮ ಉದ್ಧಾರವ ಮತ್ಯಾರು ಮಾಡ್ಯಾರು ಸವಲತ್ತು ತಾಕತ್ತು ಇನ್ಯಾರು ಕೊಟ್ಟಾರು || ಗ್ರಾಮಾದ ಸಹಕಾರ ಅದೆ ನಮ್ಮ ಸರಕಾರ ಪಂಚಾಯ್ತಿ ಕಾನೂನು ತಿಳಿಬೇಕು ಇನ್ನೂನು || ಅಬಲರಿಗೆ ಸವಲತ್ತು ಕೊಡಿಸೋಣ ಯಾವತ್ತು ಉಳ್...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....