ಅಂತರಂಗದ ಕದವ ತೆರೆಯಿಸೊ
ಅಂತರಾತ್ಮ ವಾಣಿಯನಾಲಿಸು
ಅಂತಕಾಂತನ ಕೃಪೆಯ ನೆಳಲಲಿ
ಚಿಂತಾತ್ಮನ ಕೊನೆಗಾಣಿಸು ||

ಚಿತ್ತ ಚಿತ್ತಾರ ಬಿತ್ತರ
ಬಣ್ಣ ಬದುಕಿನ ಕೆಡುಕಿಗೆ
ನೀನು ನಾನು ಎಲ್ಲರಿಲ್ಲಿ
ಮೃತ್ಯುಗೈಯಮಣ್ಣ ಬಿಂದಿಗೆ ||

ಬಿಸಿಲಗುದುರೆಯ ಸವಾರಿಯಲ್ಲಿ
ಸವೆಸಬಹುದೆ ಹಾದಿಯ
ಹುಸಿಹಂಬಲದ ನಾವೆಯಲ್ಲಿ
ಸೇರಬಹುದೆ ನಿಜ ತೀರವ ||

ಭಿತ್ತಿ ಭಿತ್ತಿಯು ಭೀತಿ ಬಲೆಯ
ಭಿತ್ತಿ ಬೆದರಿಸೂ ಸ್ಥಾವರ
ಆತ್ಮದಾನಂದದಾನಂದದ
ಜಂಗಮವಿಂದು ದುಸ್ಥರ ||

*****

 

ಗಿರಿಜಾಪತಿ ಎಂ ಎನ್
Latest posts by ಗಿರಿಜಾಪತಿ ಎಂ ಎನ್ (see all)