ರಮೇಶ ಮಧ್ಯ ವಯಸ್ಕರನಾಗಿದ್ದರೂ ಸುಂದರವಾಗಿದ್ದ. ತಾನೇ ನೋಡಿ ಮೆಚ್ಚಿ ಸುಮತಿಯನ್ನು ಮದುವೆಯಾಗಿದ್ದ. ಆತನು ಹೆಂಡತಿಯನ್ನು ಬಹಳ ಪ್ರೀತಿಸುತ್ತಿದ್ದ. ತಿಂಗಳುಗಳು ಉರುಳಿದಂತೆ ರಮೇಶನ ಮುಖ ಬಿದಗೆಯ ಚಂದ್ರನಂತೆ ಕಳೆಗುಂದುತ್ತಾ ಬಂದಿತು. ಮುಖದಲ್ಲಿ ನಗು...

ವಿವಾಹದ ಏರ್ಪಾಡುಗಳೆಲ್ಲವೂ ನಡೆದುವು. ವೈದ್ಯರೊಡನೆ ಆಲೋಚಿಸಿಲು, ಅವರು ಫೆಬ್ರವರಿ ತಿಂಗಳಲ್ಲಿ ವಿವಾಹವು ನಡೆಯ ಬಹುದೆಂದು ಹೇಳಿದರು. ಇದು ನಡೆದುದು ಡಿಸೆಂಬರ್ ತಿಂಗಳಲ್ಲಿ. ಹೀಗೆ ಕೆಲವು ವಾರಗಳು ಆನಂದದಿಂದ ಕಳೆದು ಹೋದುವು. ವಿವಾಹದ ಪ್ರಯತ್ನಗಳನ್...

ಪ್ರವೇಶ : ದಕ್ಷಿಣದ ತುದಿಯಲ್ಲಿ ನಿಂತು ನೋಡಿದರೆ ಇಡೀ ಭೂ ಪ್ರದೇಶ ಅಂದಾಜು ಭಾರತದ ನಕ್ಷೆಯಂತೆ ಕಾಣುತ್ತದೆ. ಮಧ್ಯ ಭಾಗದಲ್ಲಿ ನಿಂತು ನೋಟ ಹಾಯಿಸಿದರೆ ಸುತ್ತಲೂ ವೃತ್ತಾಕಾರವಾಗಿ ಕೋಟೆ ಕಟ್ಟಿರುವಂತೆ ಎತ್ತರದ ಗುಡ್ಡಗಳು ಭಾಸವಾಗುತ್ತವೆ. ವೃತ್ತವೊಂ...

ತೋಟದಲ್ಲಿ ತಿರುಗುವಾಗ ಭುಜವೇರಿ ಬಂದಿತ್ತು ಒಂದು ಕಂಬಳಿ ಹುಳು. ಮೈ ನವೆ ತಡೆಯಲಾರದೆ ಸಿಟ್ಟಿನಿಂದ ಕಂಬಳಿ ಹುಳುವನ್ನು ಒಂದು ಸೀಸೆಯಲ್ಲಿ ಹಾಕಿ ಬಂಧಿಸಿಟ್ಟ ತೋಟದ ಮಾಲಿ. ಗಿಡಗಳಿಗೆ ನೀರು ಹಾಕುವಾಗ ಕನಿಕರ ಗೊಂಡು ನಾಲಕ್ಕು ಎಲೆ ಆಹಾರ ಹಾಕಿ ದಿನವೂ ...

ಅನೇಕ ದಿನಗಳವರೆಗೆ ಮೇರಿಯಸ್ಸನು ಬದುಕಿದವನೂ ಅಲ್ಲ, ಸತ್ಯವನೂ ಅಲ್ಲದೆ ; ಹೀಗೆ ಜೀವಚ್ಛವವಾಗಿ ಬಿದ್ದಿದ್ದನು. ಅವನಿಗೆ ಜ್ವರವು ಬಂದು ಬಹು ದಿನಗಳವರೆಗೆ ಸನ್ನಿ ಮುಚ್ಚಿಕೊಂಡು ಕಳವಳವು ಹುಟ್ಟಿತ್ತು. ರಾತ್ರಿಯಲ್ಲೆಲ್ಲ ಕೋಸೆಟ್ಟಳ ಪಾರಾ ಯಣವೇ ಆಗಿತ್...

ಗುತ್ತಿನವರು ನಡೆಸುವ ದೊಂಪದ ಬಲಿ ಅಂದರೆ ಆಸುಪಾಸಿನ ಹತ್ತೂರಲ್ಲಿ ಎಲ್ಲೂ ಇಲ್ಲದ್ದು. ಸುಗ್ಗಿ ಕೊಯ್ಲು ಕಳೆದು ಸರಿಯಾಗಿ ಮೂವತ್ತನೆಯ ದಿವಸಕ್ಕೆ ನಡೆಯುವ ದೊಂಪದ ಬಲಿ ಊರಿಗೆ ಎಲ್ಲಿಲ್ಲದ ಕಳೆ ತರುತ್ತದೆ. ನಾಲ್ಕೂರುಗಳ ಜನ ಅಲ್ಲಿ ನೆರೆದು ಜಾತ್ರೆಯ ವ...

ಪಡಸಾಲೆಯಲ್ಲಿ ನೇತು ಹಾಕಿದ್ದ ತಾತನ ಚಿತ್ರ ನೋಡುತ್ತ ನಿಂತಿತ್ತು ಮಗು. “ಅಮ್ಮ! ತಾತಂಗೆ, ಕಣ್ಣು, ಮೂಗು, ಬಾಯಿ, ಎಲ್ಲಾ ಇದೆ ಗಡ್ಡ ಏಕೆ ಇಲ್ಲ?” ಎಂದು ಕೇಳಿತು. “ತಾತಂಗೆ ಗಡ್ಡ ಇದೆ ಅಲ್ಲ, ಕಾಣಿಸಲಿಲ್ಲವೆ?” ಎಂದಳು ...

ಜೀನ್ ವಾಲ್ಜೀನನು, ಮೇರಿಯಸ್ಸಿನ ಮೇಲೆ ಬಾಗಿ, ತನ್ನ ಬೊಗಸೆಯಲ್ಲಿ ಸ್ವಲ್ಪ ನೀರನ್ನು ತೆಗೆದು, ಅವನ ಮುಖದಮೇಲೆ ಮೆಲ್ಲನೆ ಚಿಮುಕಿಸಿದನು. ಮತ್ತೊಂದಾವೃತ್ತಿ ನದಿಯೊಳಕ್ಕೆ ತನ್ನ ಕೈಯನ್ನು ಇಡು ತಿರುವಾಗ, ಹಠಾತ್ತಾಗಿ ಅವನ ಮನಸಿಗೆ ಏನೋ ಹೇಳಲಾಗ ದಂತಹ ...

ಕನ್ನಡ ಎಂ.ಎ. ನಲ್ಲಿ ಮೈಸೂರು ಯೂನಿವರ್ಸಿಟಿಯಲ್ಲಿಯೇ ಪ್ರಥಮ ಬ್ಯಾಂಕ್ ಸಿಕ್ಕಾಗ ನನಗಾದ ಆನಂದ ಅಪರಿಮಿತ. ಒಟ್ಟು ಎಂಟು ಬಂಗಾರದ ಪದಕಗಳು ನನಗೆ ಲಭಿಸಿದ್ದವು. ಈ ಒಂದು ರಾಂಕ್‌ಗಾಗಿ. ಇದೇ ಮೊದಲ ಬಾರಿಯೇನೂ ನಾನು ರಾಂಕ್ ಬಂದದ್ದಲ್ಲ. ಬಿ.ಎ.ನಲ್ಲಿ ಇದ...

ಉದರಿದ ಹೂ ಒಂದು, ಗಾಳಿ ಜೊತೆ ಸೇರಿ ದಾರಿ ತಪ್ಪಿತು. ತಾಯಿ ಗಿಡ ಹೇಳಿತು- “ಪೋಲಿ ಗಾಳಿ ಜೊತೆ ಅಲೆಯ ಬೇಡ” ಎಂದು. ಹೂ ಕೇಳಲಿಲ್ಲ. ಗಾಳಿ ಬಿಡಲಿಲ್ಲ. ತೋಳು ತೋಳಿಗೆ ಸೇರಿಸಿ ಗಾಳಿ-ಹೂವು ಬಹು ದೂರ ನಡದೇಬಿಟ್ಟವು. ತಾಯಿ ಗಿಡದ ಹೃದಯ ಕಂ...

1...3132333435...137

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....