ಮೊನ್ನೆ ನಾನು ಬೇಸಿಗೆಯಲ್ಲಿ ರಜಕ್ಕೆ ಊರಿಗೆ ಬಂದಾಗ ಭೀಮಣ್ಣ ತೀರಿಕೊಂಡ ಸುದ್ದಿಯನ್ನು ಅಮ್ಮ ಹೇಳಿದಳು. ಊಟ ರುಚಿಸಲಿಲ್ಲ.  ಭೀಮಣ್ಣ ಗಟ್ಟಿ ಮುಟ್ಟಾಗೇ ಇದ್ದ.  ನಮ್ಮಂತವರಿಗೆ ಅಮರಿಕೊಳ್ಳುವ ಡಯೊಬಿಟೀಸ್, ಬಿಪಿ ಆತನ ಬಳಿಯೂ ಸುಳಿದಿರಲಿಲ್ಲ ಆತನ ಜೀವ...

ಪ್ರಿಯ ಗೆಳತಿ, ಅಕಸ್ಮಿಕದ ಈ ಪತ್ರದಿಂದ ನೀನು ಒಂದೆರಡು ಕ್ಷಣ ಅನಂದ ಆಶ್ಚರ್ಯ ಪಡುತ್ತೀ ಎಂದು ನನಗೆ ಗೊತ್ತಿತ್ತು. ಜೊತೆ ಜೊತೆಗೆಯೇ ಆರು ವರ್ಷಗಳಿಂದ ಮರೆತು ಹೋದ ಇವಳು ಧುತ್ತನೆ ಮತ್ತೇಕೆ ಬಂದಳು ಎಂದು ಕೂಡಾ ಅಂದುಕೊಳ್ಳುವಿ ಅಲ್ಲವೆ? ನೀನು ಅಂದುಕ...

ಅನಾಥೆಯಾದ ಒಬ್ಬ ಮುದುಕಿಯಿದ್ದಳು ಒಂದೂರಿನಲ್ಲಿ. ಆಕೆಗೆ ಯಾರೂ ಇರಲಿಲ್ಲ. ದಿನಾಲು ರಾಟಿಯ ಮೇಲೆ ನೂಲುವಳು. ಬಂದಷ್ಟರಲ್ಲಿ ಉದರ ನಿರ್ವಾಹ ಸಾಗಿಸುವಳು. ರಾತ್ರಿ ಸಹ ನಿದ್ರೆ ಬರುವವರೆಗೆ ನೂಲುತ್ತ ಕುಳಿತುಕೊಳ್ಳುವಳು. ಒಂದು ದಿವಸ ರಾತ್ರಿ ಬಹಳ ಹೊತ್...

ಎಲ್ಲರೂ ಆ ಕಡೆನೇ ಓಡ್ತಾ ಇದ್ದಾರೆ. ಅವಳನ್ನು ಎಳೆದುಕೊಂಡು ಆತ ಎಲ್ಲರಿಗಿಂತಲೂ ಮುಂದೆ ಮುಂದೆ ಓಡ್ತಾ ಇದ್ದಾನೆ. ಒಂದೊಂದೇ ಮೆಟ್ಟಿಲು ಹತ್ತಿ ಮೇಲೆ ಏರುತ್ತಿದ್ದಾನೆ. ಅವು ಕಲ್ಲಿನ ಮೆಟ್ಟಿಲುಗಳಲ್ಲ; ಮನುಷ್ಯರೇ ಬೆನ್ನು ಬಾಗಿಸಿ ಮೆಟ್ಟಿಲುಗಳಾಗಿದ್ದ...

ಒಬ್ಬಾಕೆ ಹೆಣ್ಣು ಮಗಳಿದ್ದಳು. ಆಕೆ ನೀರು ಹೊಯ್ದುಕೊಂಡಿದ್ದಳು. ಅವರ ಮನೆಯಲ್ಲಿ ನಾಯಿಯೂ ಗಬ್ಬವಾಗಿತ್ತು. ತವರು ಮನೆಯವರು ಬುತ್ತಿತಂದರು. ನಾಯಿ ತನ್ನಲ್ಲೇ ಅಂದುಕೊಂಡಿತು – ಈಕೆ ಉಂಡ ಒಂದು ಅಗುಳಾದರೂ ನನಗೆ ಹಾಕಿದರೆ ಅದನ್ನೇ ನಾನು ತಿನ್ನು...

ಲಂಡನ್ ಆರ್ಕಿಯಾಲಜಿ ಡಿಪಾರ್ಟಮೆಂಟದಲ್ಲಿ ಅ ಹುಡುಗ ತುಂಬಾ ಗಡಿಬಿಡಿಯಾಗಿಯೇ ಓಡಾಡುತ್ತಿದ್ದ. ಕೈಯಲ್ಲಿ ದೊಡ್ಡ ದೊಡ್ಡ ಫೈಲ್ಗಳು, ಕೊರಳಿಗೆ ಇಳಿಬಿಟ್ಟ ಟೈ ಕೆದರಿದ ಗುಂಗುರು ಕೂದಲು ಬಹುಶಃ ಒಂದು ವಾರದಿಂದ ದಾಡಿ ಮಾಡಿಕೊಂಡಿರಲಾರದಂತಹ ಮುಖ. ಆದರೂ ಅರ...

ಹೊಲಮನೆ, ಬೆಳ್ಳಿ ಬಂಗಾರ ಸಾಕಷ್ಟು ಗಳಿಸಿದ ಒಬ್ಬ ದೈವುಳ್ಳ ಗೃಹಸ್ಥನು ಕಾಯಿಲೆಯಿಂದ ಹಾಸಿಗೆ ಹಿಡಿದನು. ಆ ಗೃಹಸ್ಥನು ಸಾಧ್ಯವಾದ ಸೌಮ್ಯೋಪಾಯಗಳಿಂದ ತನ್ನ ಕಾಯಿಲೆ ಕಳಕೊಳ್ಳುವ ಎತ್ತುಗಡೆ ನಡೆಸಿದನು. ಅದಕ್ಕನುಗುಣವಾದ ಔಷಧಿ-ಚಿಕಿತ್ಸೆಗಳನ್ನು ಅನುಸರ...

ಸವಿತ ಇನ್ನೂ ಅಡುಗೆ ಮನೆಯಿಂದ ಹೊರಬರದೆ ಇರುವುದನ್ನು ನೋಡಿ ಸವಿತ ಇವತ್ತು ರಜೆ ಹಾಕಿದ್ದಿಯೇನೇ? “ಡೈನಿಂಗ್ ಹಾಲಿನಿಂದಲೇ ಸಂಜೀವ ಕೂಗು ಹಾಕಿದ. ಕೈಲಿ ಕಾಫಿ ಲೋಟ ಹಿಡಿದು ಬಂದ ಸವಿತ “ಹ್ಹೂ, ರಜಾನೇ ಇನ್ನು ಮೇಲೆ ಪರ್ಮನೆಂಟ್ ರಜಾ, ತಗ...

ಒಂದೂರಿನಲ್ಲಿ ಇಬ್ಬರು ಅಣ್ಣತಮ್ಮಂದಿರಿದ್ದರು. ಅವರವರ ಹೆಂಡಿರು ಬಂದಿದ್ದರು. ಅಣ್ಣನಿಗೆ ಮಕ್ಕಳಾಗಿರಲಿಲ್ಲ. ತಮ್ಮನಿಗೆ ಸಾಕಷ್ಟು ಮಕ್ಕಳಾಗಿದ್ದರು. ನೆಗೆಣ್ಣಿಯರಲ್ಲಿ ಕೂಡಿನಡೆಯಲಿಲ್ಲವೆಂದು ಅವರಿಬ್ಬರೂ ಆಸ್ತಿಯನ್ನು ಹಂಚಿಕೊಂಡು ಬೇರೆಯಾದರು. ದೇಶ...

ಯಾಕೋ ನನ್ನ ಮನಸ್ಸು ಇತ್ತೀಚೆಗೆ ಸ್ಥಿಮಿತವಾಗಿಯೇ ಉಳಿಯುತ್ತಿಲ್ಲ.  ನನಗೆ ಯಾವ ಕೊರತೆಯೂ ಇಲ್ಲ ಹಾಗೆ ನೋಡಿದರೆ. ದೇಶ ವಿದೇಶಿಗರು ಅಂದುಕೊಳ್ಳುವ ಹಾಗೆ ಅರಬ ನಾಡಿನ ಅರಬರಾಜನ ಹಾಗೆಯೇ ಇದ್ದೇನೆ. ನೂರಾರು ಒಂಟೆಗಳ ಸರದಾರ ಎಂದುಕೊಳ್ಳಿ, ಸಾವಿರಾರು ಎಕ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...