Home / ಕವನ / ಭಾವಗೀತೆ

ಭಾವಗೀತೆ

ಹುಡುಕಾಟವೋ . . . ಹುಡುಗಾಟವೋ . . . ಹುಡುಗಾಟವೋ . . . ಕೊನೆಗೆ ಎಣಗಾಟವೋ . . . //ಪ// ಇಲ್ಲಿ ಯಾವುದೂ ಸರಿಯಲ್ಲ ಅದ ಹೇಳುವುದೂ ಸರಿಯಲ್ಲ ಹೇಳದಿರುವುದೂ ಸರಿಯಲ್ಲ ಕೊನೆಗೂ ಯಾವುದೂ ಸರಿಯಲ್ಲ! ಯಾವುದೇ ವಾದಕೂ ಫುಲ್‌ಸ್ಟಾಪ್ ಇಲ್ಲ ಅದಕೂ ಹೃದಯಕೂ...

ಎಲ್ಲವೂ ಸಂಭವ ಯಾವುದೂ ಅಲ್ಲ ಅಸಂಭವ //ಪ// ಮನುಷ್ಯನಾಗಿ ಹುಟ್ಟಿರುವಾಗ ನೆಲದ ಮೇಲೆ ನಡೆದಾಡಿರುವಾಗ ಉಪ್ಪು ಖಾರ ತಿಂದಿರುವಾಗ ಮೈಯಲಿ ರಕ್ತ ಬಿಸಿಯಿರುವಾಗ….. ಮಾವು ಬೇವು ಮೆದ್ದಿರುವಾಗ ನಲಿವೊಂದೆ ಅಂತಿಮವೇನು? ಎಳ್ಳು ಬೆಲ್ಲ ತಿಂದ ಮಾತ್ರಕ...

ನೀ ಬರುವ ದಾರಿಯಲಿ ಅರಳಿವೆ ಹೂಗಳು ಗಾಳಿ ಬೀಸಿವೆ ಚಿಗುರೆಲೆಗಳು ನೆರಳು ನೀಡಿವೆ ಗಿಡ ಮರಗಳು ನೀ ಬರುವ ದಾರಿಯಲಿ ಹಾಡಿವೆ ಹಕ್ಕಿಗಳು ಕುಣಿದಿವೆ ನವಿಲುಗಳು ಬೆರಗಾಗಿ ನೋಡಿವೆ ಜಿಂಕೆ ಸಾರಂಗಗಳು ನೀ ಬರುವ ದಾರಿಯಲಿ ನೆರಳಾಗಿದೆ ಚಿತ್ತಾರ ನೆಲವಾಗಿದೆ ...

ಚೆಲುವಿನ ನಾಡು ಕರುನಾಡು-ಹೊಯ್ ಅದರೊಳಗೊಂದು ಒಳನಾಡು ಅದನು ಕರೆವರು ತುಳುನಾಡು-ಅದ ಕಣ್ಣನು ತುಂಬಿಸಿ ಪದ ಹಾಡು /ಪ// ಪಶ್ಚಿಮ ಸಾಗರ ತೀರದಲಿ-ತುಸು ಪಕ್ಕದ ಬೆಟ್ಟದ ಸಾಲಿನಲಿ ಹಸಿರನು ಹಾಸಿದ ತಾಣದಲಿ-ಗಿಳಿ ಕಾಜಾಣಗಳು ಹಾಡುವಲಿ ನಿಂತ ನಾಡದು ತುಳುನಾ...

ಹಾತೊರೆಯುತಿದೆ ಮನಸು ಓಡುವೆ ಏಕೆ ದೂರ ಕಾತರಿಸುತಿದೆ ಕನಸು ಕಾಡುವೆ ಏಕೆ ಅಪಾರ ನಗೆ ಚೆಲ್ಲಿದ ನೋಟ ಅಚ್ಚಾಗಿದೆ ಒಳಗೆ ಹುಚ್ಚಾಗಿ ಪಲುಕು ಕಿಚ್ಚಾಗಿದೆ ಬದುಕು ನೀನಿರದ ನಾನು ಶಶಿಯಿರದ ಬಾನು ಇದು ಅಲ್ಲ ಕವಿತೆ ನಂಬು ಇದನು ನೀನು ನೀನಿಡುವ ಹೆಜ್ಚೆ ನವ...

ಹುಡುಗ: ಬಾರೆ ಹುಡುಗಿ ಜಾಲಿಯಾಗಿ ಬೆಟ್ಟ ಹತ್ತುವ ಬೆಟ್ಟ ಹತ್ತಿ ಮೋಡ ಮುತ್ತಿ ಹಕ್ಕಿ ಆಗುವ – ಬೆ- ಳ್ಳಕ್ಕಿ ಆಗುವ ಹುಡುಗಿ: ಬೆಟ್ಟ ಯಾಕೆ ಮಲ್ಟಿ ಸ್ಟೋರ್‍ಡ್ ಬಿಲ್ಡಿಂಗ್ ಇರುವಾಗ ಹತ್ತೋದ್ಯಾಕೆ ನೋಯೋದ್ಯಾಕೆ ಲಿಫ್ಟು ಇರುವಾಗ – ಸಲೀ...

ಬೆಳಗಿದೆ ಪ್ರೇಮದ ದೀಪ ಅದರಲಿ ನಿನ್ನಯ ರೂಪ ಕಂಡಿದೆ ಮನದುಂಬಿದೆ ಜೊತೆ ತಂದಿದೆ ಕಡುತಾಪ// ಕತ್ತಲ ದಾರಿಗಳಲ್ಲಿ ನಿನ್ನಯ ನೆನಪೆ ಹಣತೆ ಬೆಟ್ಟ ಇರಲಿ ಕಣಿವೆ ಬರಲಿ ಪಯಣಕ್ಕಿಲ್ಲ ಚಿಂತೆ ಮೋಡಗಳ ನೆರಳಾಟ ನಿನ್ನ ರೆಪ್ಪೆಗಳ ಮಿಡಿತ ತರಬಲ್ಲುದು ಅದು ಪ್ರೀ...

ಸುಂದರ ಮನಸುಗಳು ಬಣ್ಣದ ಕನಸುಗಳು ಗರಿ ಬಿಚ್ಚಲಿ ಆಕಾಶದಲಿ ಬೆಳದಿಂಗಳು ತಾವಾಗುತಲಿ //ಪಲ್ಲವಿ// ನಿಮ್ಮಯ ಜೊತೆಗಿವೆ ಹಕ್ಕಿಗಳು ಕಾಂತಿಯ ಚಿಮ್ಮುವ ಕನಸುಗಳು ಜೊತೆಯಲಿ ಓಡುವ ಮೋಡಗಳು ಹಗುರಾಗಿರುವ ಮನಸುಗಳು ತೇಲುವ ಆಡುವ ಈ ಸೊಗಸು ತುಂಬಲಿ ನನ್ನೆಲ್ಲ...

ಗೆಳತಿ, ನೀನಾದರೆ ಸನಿಹ ಮೂಡುವುದು ಕವಿತೆ ಇಲ್ಲವಾದರೆ ಕತೆ ಆರಿಸಿಕೊ ನಿನಗ್ಯಾವುದು ಇಷ್ಟ ಬೇಡ ನನ್ನ ಚಿಂತೆ ನನಗಿರುವಾಗ ನಿನ್ನ ಚಿಂತೆ /ಪ// ನನ್ನ ಪ್ರೀತಿ ಅಚಲ ಇರಬಹುದು ಅದು ಹಿಮಾಚಲ ಇದಕೆ ಬೇಕಿಲ್ಲ ಸಮರ್ಥನೆ ಮಾಡಿದರೂ ನೀ ನಿರಾಕರಣೆ ನೀನು ಬದು...

ನಿನ್ನ ಕೆಂದುಟಿಯಿಂದ ಬರೆ ಪ್ರೇಮ ಕಾವ್ಯವನು ತೆರೆದಿರುವ ನನ್ನೆದೆಯ ಹಾಳೆ ಮೇಲೆ ಭಾವಗೀತೆಯ ಮೀರಿ ಮಹಾಕಾವ್ಯ ಮೂಡಲಿ ಅದ ಓದಿ ದಾಟುವೆನು ಜಗದ ಎಲ್ಲೆ //ಪ// ಗಿಳಿ ಕೋಗಿಲೆ ಬೇಡ ನಿನ್ನ ಹಾಡಿನ ಎದುರು ನವಿಲ ನರ್ತನವೇಕೆ ನೀನು ನಡೆವಾಗ ಚುಕ್ಕಿ ಚಂದ್ರ...

1...678910

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...