ಬೆಳಗಿದೆ ಪ್ರೇಮದ ದೀಪ

ಬೆಳಗಿದೆ ಪ್ರೇಮದ ದೀಪ
ಅದರಲಿ ನಿನ್ನಯ ರೂಪ
ಕಂಡಿದೆ ಮನದುಂಬಿದೆ
ಜೊತೆ ತಂದಿದೆ ಕಡುತಾಪ//

ಕತ್ತಲ ದಾರಿಗಳಲ್ಲಿ
ನಿನ್ನಯ ನೆನಪೆ ಹಣತೆ
ಬೆಟ್ಟ ಇರಲಿ ಕಣಿವೆ ಬರಲಿ
ಪಯಣಕ್ಕಿಲ್ಲ ಚಿಂತೆ

ಮೋಡಗಳ ನೆರಳಾಟ
ನಿನ್ನ ರೆಪ್ಪೆಗಳ ಮಿಡಿತ
ತರಬಲ್ಲುದು ಅದು ಪ್ರೀತಿ ಮಳೆ
ಅದಕಾಗುವೆ ನಾ ತುಂಬುಹೊಳೆ

ತುಂಬಿದೆ ಹೃದಯ ಕಡಲಾಗಿ
ಅಲೆ ಎದ್ದಿವೆ ತಡೆ ಇರದಾಗಿ
ನಿನ್ನನು ಸೇರುವ ಭಾಗ್ಯ
ನದಿಗೆ ಮಾತ್ರ ಅದು ಸಾಧ್ಯ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಲ್ಲಿಯವರೆಗೆ ನಾನು
Next post ಸೂಚನೆಯ ಪತ್ರ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…