ಹಾತೊರೆಯುತಿದೆ ಮನಸು
ಓಡುವೆ ಏಕೆ ದೂರ
ಕಾತರಿಸುತಿದೆ ಕನಸು
ಕಾಡುವೆ ಏಕೆ ಅಪಾರ

ನಗೆ ಚೆಲ್ಲಿದ ನೋಟ
ಅಚ್ಚಾಗಿದೆ ಒಳಗೆ
ಹುಚ್ಚಾಗಿ ಪಲುಕು
ಕಿಚ್ಚಾಗಿದೆ ಬದುಕು

ನೀನಿರದ ನಾನು
ಶಶಿಯಿರದ ಬಾನು
ಇದು ಅಲ್ಲ ಕವಿತೆ
ನಂಬು ಇದನು ನೀನು

ನೀನಿಡುವ ಹೆಜ್ಚೆ
ನವಿಲಿಗೇಕೊ ಲಜ್ಜೆ
ಲಜ್ಜೆ ಹೆಜ್ಜೆ ಗೆಜ್ಜೆ
ನನಗೊ ಸ್ವರ್ಗ ಸಜ್ಜೆ

ನೀನಾದರೆ ಧರಣಿ
ನಾನಾಗುವೆ ಭರಣಿ
ನಮಗಿನ್ನೇಕೆ ನೆಲೆ
ಹರಿಯುವ ಆಗಿ ಹೊಳೆ
*****