ಎಲ್ಲವೂ ಸಂಭವ
ಯಾವುದೂ ಅಲ್ಲ ಅಸಂಭವ //ಪ//
ಮನುಷ್ಯನಾಗಿ ಹುಟ್ಟಿರುವಾಗ
ನೆಲದ ಮೇಲೆ ನಡೆದಾಡಿರುವಾಗ
ಉಪ್ಪು ಖಾರ ತಿಂದಿರುವಾಗ
ಮೈಯಲಿ ರಕ್ತ ಬಿಸಿಯಿರುವಾಗ…..
ಮಾವು ಬೇವು ಮೆದ್ದಿರುವಾಗ
ನಲಿವೊಂದೆ ಅಂತಿಮವೇನು?
ಎಳ್ಳು ಬೆಲ್ಲ ತಿಂದ ಮಾತ್ರಕೆ
ಒಳ್ಳೆಯ ಮಾತೆ ಸಾಕೇನು?
ಮೂಗಿದ್ದಾಗ ನೆಗಡಿ ಖಚಿತ
ಕಣ್ಣಿದ್ದಾಗ ಕಂಬನಿ ವಿಧಿತ
ಎಲ್ಲವೂ ಖಚಿತ ಎಲ್ಲವೂ ವಿಧಿತ
ಹೇಳಿ ಬದುಕಿಗೆ ಯಾರು ಅತೀತ?
*****