
ಬಟ್ಟಬಯಲಲ್ಲಿ ಒಂದು ಶರಧಿ ಹುಟ್ಟಿತ್ತು. ಆ ಶರಧಿಯ ನಡುವೆ ಒಂದು ಕಮಲ ಹುಟ್ಟಿತ್ತು. ಆ ಕಮಲದ ನೆಲೆಯ ಕಾಣಲರಿಯದೆ, ತೊಳಲಿ ಬಳಲಿ, ಜಗದೊಳಗೆ ನಚ್ಚುಮೆಚ್ಚಿಗೊಳಗಾಗಿ, ಮುಚ್ಚಳ ಪೂಜೆಗೆಸಿಲ್ಕಿ ಕುಲಕೆ ಛಲಕೆ ಕೊಂದಾಡಿ, ಭವಕೆ ಗುರಿಯಾಗುವ ಮನುಜರ ಕಂಡು, ...
ಪಶ್ಚಿಮದ ಕದವ ತೆಗೆದು, ಬಚ್ಚಬರಿಯ ಬೆಳಗನೋಡಲೊಲ್ಲದೆ, ಕತ್ತಲೆಯ ಬಾಗಿಲಿಗೆ ಮುಗ್ಗಿ ಕಣ್ಣುಗಾಣದ ಅಂಧಕರಂತೆ, ಜಾರಿ ಜಾರಿ ಎಡವಿಬಿದ್ದು, ಕರ್ಮಕ್ಕೆ ಗಿರಿಯಾಗುವ ಮರ್ತ್ಯದ ಮನುಜರಿರಾ ನೀವು ಕೇಳಿರೋ ಹೇಳಿಹೆನು. ನಮ್ಮ ಶರಣರ ನಡೆ ಎಂತೆಂದರೆ, ಕತ್ತಲೆಯ...
ದಾರಿವಿಡಿದು ಬರಲು, ಮುಂದೆ ಸರೋವರವ ಕಂಡೆ. ಸರೋವರದ ಮೇಲೊಂದು ಮಹಾದಳದ ಕಮಲವ ಕಂಡೆ. ಆ ಕಮಲವರಳಿ ವಿಕಸಿತವಾಯಿತ್ತು. ಪರಿಮಳವೆಸಗಿತ್ತು. ಆ ಪರಿಮಳದ ಬೆಂಬಳಿಗೊಂಡು ಹೋಗುತಿರಲು, ಮುಂದೆ ಒಂದು ದಾರಿಯ ಕಂಡು, ಆ ಮುಂದಳ ದಾರಿಯಲ್ಲಿ ಹೋದವರೆಲ್ಲರು ನಿಂದ...
ಸಾಸಿರ ದಳಕಮಲವೆಂದರೆ, ಸೂಸಿಕೊಂಡಿರುವ ಮನ. ಪವನವೆಂದರೆ, ಎಲ್ಲೆಡೆಯಲ್ಲಿ ಸೂಸಿ ಆಡುವಂಥಾದ್ದು. ಬಿಂದುವೆಂದರೆ, ಆಗುಮಾಡುವಂಥಾದ್ದು. ಈ ಮನಪವನಬಿಂದು, ಮೂರನು ಒಡಗೂಡಿ ನೋಡಲು ಪರಂಜ್ಯೋತಿ ಪ್ರಕಾಶವಾದಂಥ ಬೆಳಗೆ ನೆನ್ ಕಂಗಳ ಮುಂದೆ ನಿಂದಿತ್ತು. ಆ ಮಹ...
ಅಯ್ಯ ನಾನು ಊರ ಮರೆದು ಆಡ ಹೋದರೆ ಒಕ್ಕಲು ಹೆಚ್ಚಿ ಸೊಕ್ಕಾಟ ಘನವಾಯಿತ್ತು. ಇದ ಕಂಡು ಊರ ಹೊಕ್ಕೆ, ಸ್ಥಾನದಲ್ಲಿ ನಿಂದೆ, ಒಂಬತ್ತು ಬಾಗಿಲ ಕದವನಿಕ್ಕಿದೆ. ಜ್ಞಾನಾಗ್ನಿಯ ಹೊತ್ತಿಸಲು, ಉರಿ ಎದ್ದಿತ್ತು. ಉಷ್ಣ ಊರ್ಧ್ವಕ್ಕೇರಿತ್ತು. ತಲೆ ಎತ್ತಿ ನೋಡ...
ಆಧಾರವ ಬಲಿಯೆ, ಬೇಗೆ ಉರಿಯಿತ್ತು. ಆ ಕಿಚ್ಚು ಆವರಿಸಿ ಊರ್ಧ್ವಕ್ಕೇರಿತ್ತು. ಸಾಸಿರದಳ ಅಮೃತ ಕೊಡ ಕಾಯಿತ್ತು. ಕಾದ ಅಮೃತ ಉಕ್ಕಿ ತೊಟ್ಟಿಕ್ಕಿ ಅಮೃತವನುಂಡು ಹಸಿವೆ ಕೆಟ್ಟಿತ್ತು. ತೃಷೆಯಡಗಿತ್ತು. ನಿದ್ರೆ ಆರತಿತ್ತು. ಅಂಗಗುಣವಳಿಯಿತ್ತು. ಲಿಂಗಗುಣ...
ಒಂದು ಹುತ್ತಕ್ಕೆ ಒಂಬತ್ತು ಬಾಗಿಲು ಇರುವದು. ಒಂದು ಸರ್ಪ ಒಂಬತ್ತು ಬಾಗಿಲಲ್ಲಿಯು ನೋಡುತಿಪ್ಪುದು. ಒಂಬತ್ತು ಬಾಗಿಲಿಗೆ ಕದವನಿಕ್ಕಿ ಒಂದು ಬಾಗಿಲ ಅಗುಳಿ ದಾರವಂದವನಿಕ್ಕಿ ಬಲಿಯಲು ತಿರುಗುವುದಕ್ಕೆ ತಾವ ಕಾಣದೆ, ಇರುವುದಕ್ಕೆ ಇಂಬ ಕಾಣದೆ, ನಿಲುವು...
ಒಂದು ಊರಿಗೆ ಒಂಬತ್ತು ಬಾಗಿಲು, ಆ ಊರಿಗೆ ಐವರು ಕಾವಲು, ಆರು ಮಂದಿ ಪ್ರಧಾನರು, ಇಪ್ಪತ್ತೈದು ಮಂದಿ ಪರಿವಾರ, ಅವರೊಳು ತೊಟ್ಟನೆ ತೊಳಲಿ ಬಳಲಲಾರದೆ, ಎಚ್ಚತ್ತು ನಿಶ್ಚಿಂತನಾದ ಅರಸರ ಕಂಡೆ. ಅರಸಿನ ಗೊತ್ತುವಿಡಿದು, ಒಂಬತ್ತು ಬಾಗಿಲಿಗೆ ಲಿಂಗಸ್ಥಾಪ್...
ತುಂಬಿದ ಮನೆಯ ಹೊಕ್ಕರೆ ದೊಂದಳವಾಯಿತ್ತು. ಈ ಸಂದಳಿಗಾರದೆ, ತುಂಬಿದ ಮನೆಯ ಕಿಚ್ಚನಿಕ್ಕಿದರೆ, ನಿಶ್ಚಿಂತವಾಯಿತ್ತು. ಬಟ್ಟಬರಿಯ ಮನೆಯೊಳಗೆ ನಿಮ್ಮ ಬೆಳಗನೆ ನೋಡಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****...
ಬಟ್ಟಬಯಲಲ್ಲಿ ಒಂದು ಮರ ಹುಟ್ಟಿತ್ತು. ಅದಕ್ಕೆ ಸುತ್ತಲು ಬೇರು ಆವರಿಸಿತ್ತು. ಅದಕ್ಕೆ ಶತಕೋಟಿ ಕೊನೆ ಬಿಟ್ಟಿತ್ತು. ಅಡಗಿದ ಬೇರನೆ ಸವರಿ, ಶತಕೋಟಿ ಕೊನೆಯನೆ ಕಡಿದು, ಮರ ಒಣಗಿತ್ತು. ಉಲುಹು ನಿಂದಿತ್ತು. ಎಲೆ ಉದುರಿತ್ತು. ತರಗೆಲೆಯಾದ ಶರಣರ ಚರಣವಿ...














