ಲಿಂಗಮ್ಮನ ವಚನಗಳು – ೭೭

ದಾರಿವಿಡಿದು ಬರಲು, ಮುಂದೆ ಸರೋವರವ ಕಂಡೆ.
ಸರೋವರದ ಮೇಲೊಂದು ಮಹಾದಳದ ಕಮಲವ ಕಂಡೆ.
ಆ ಕಮಲವರಳಿ ವಿಕಸಿತವಾಯಿತ್ತು. ಪರಿಮಳವೆಸಗಿತ್ತು.
ಆ ಪರಿಮಳದ ಬೆಂಬಳಿಗೊಂಡು ಹೋಗುತಿರಲು,
ಮುಂದೆ ಒಂದು ದಾರಿಯ ಕಂಡು,
ಆ ಮುಂದಳ ದಾರಿಯಲ್ಲಿ ಹೋದವರೆಲ್ಲರು
ನಿಂದೆ ಕುಂದುಗಳಿಗೊಳಗಾಗಿ ಸಂದು ಹೋದರು.
ಇದ ಕಂಡು ನಾ ಹೆದರಿಕೊಂಡು ಎಚ್ಚತ್ತು,
ಚಿತ್ತವ ಸುಯಿಧಾನವ ಮಾಡಿ
ಹಿತ್ತಿಲ ಬಾಗಿಲಕದವ ತೆಗೆದು,
ನೋಡಿದರೆ ಬಟ್ಟ ಬಯಲಾಗಿದ್ದಿತ್ತು.
ಆ ಬಟ್ಟಬಯಲೊಳಗೆ,
ಮಹಾ ಬೆಳಗನೆ ನೋಡಿ ನಾ
ಎತ್ತ ಹೋದೆನೆಂದರಿಯೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಣರಂಗ
Next post ನಗೆ ಡಂಗುರ – ೧೯೭

ಸಣ್ಣ ಕತೆ